ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿ ಸಾಧಿಸಬಹುದು: ದೈವಾಡಿ

If you work hard with enthusiasm, you can achieve your life goals: Daiwadi

ವಿಜಯಪುರ 19: ವಿದ್ಯಾರ್ಥಿಗಳು ನೈತಿಕತೆ, ಬದ್ಧತೆ ಮತ್ತು ಉತ್ಸಾಹದಿಂದ ಶ್ರಮ ವಹಿಸಿದರೆ ಜೀವನದ ಗುರಿಯನ್ನು ಸಾಧಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಹೇಳಿದ್ದಾರೆ. 

ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನಸಿಂರ್ಗ್ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.   

ಕೆ.ಬಿ.ಜೆ.ಎನ್‌.ಎಲ್ ಕಾನೂನು ಸಲಹೆಗಾರ್ತಿ ಡಾ. ರಂಜಿತಾ ಕೆ. ಆರ್‌. ಮಾತನಾಡಿ, ನಸಿಂರ್ಗ್ ಸೇವೆಯ ಮಾನವೀಯತೆಯನ್ನು ಜೀವಂತವಾಗಿಡುವ ಶ್ರೇಷ್ಟ ವೃತ್ತಿಯಾಗಿದೆ ಎಂದು ಹೇಳಿದರು. 

ಈ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.   

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ, ಬೆಂಗಳೂರಿನ ಎಂ. ಎಸ್‌. ರಾಮಯ್ಯ ನಸಿಂರ್ಗ್ ಕಾಲೇಜು ಮತ್ತು ಸಂಶೋಧನೆ ಕೇಂದ್ರದ ಡೀನ್ ಮತ್ತು ಪ್ರಾಚಾರ್ಯೆ ಡಾ. ಜಾದವ ಸೋನಾಲಿ ತಾರಾಚಂದ, ಬಾಪು ಖೋದ್ನಾಪುರ, ಡಾ. ಸುಚಿತ್ರಾ ರಾಟಿ, ಡಾ. ಕವಿತಾ ಕೆ. ಡಾ. ಬಸೀರ್ ಅಹ್ಮದ್, ಡಾ. ಶ್ವೇತಾ, ಡಾ. ಸಂಕಪ್ಪ, ಡಾ. ಅಮಿತಕುಮಾರ, ಡಾ. ಅಪ್ಪನಗೌಡ, ನಜೀರ್ ಬಳಗಾರ, ಲಕ್ಷ್ಮೀ ಅಗ್ನಿಹೊತ್ರಿ, ಸೌಜನ್ಯ ಪೂಜಾರ, ಮಂಜುನಾಥ ಪಾಟೀಲ, ಅನಿಲ ಪಡಗಾನೂರ, ಕಿರಣ ಶಿರೋಳ್ಕರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.    

ಡಾ. ಅಮರನಾಥ ಷಣ್ಮುಗೆ ಸ್ವಾಗತಿಸಿದರು.  ಡಾ. ಸತೀಶ ನಡಗಡ್ಡಿ ಮತ್ತು ಗುರುರಾಜ ಗುಗ್ಗರಿ ಪರಿಚಯಿಸಿದರು.  ಡಾ. ಜಯಶ್ರೀ ಪೂಜಾರಿ ವಂದಿಸಿದರು.