ಗೋವು ಕಳ್ಳತನ ಮಾಡಿದರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು : ಸಚಿವ ಮಂಕಾಳು ವೈದ್ಯ ಘೋಷಣೆ
ಕಾರವಾರ 03: ಗೋವು ಕಳ್ಳತನ ಮಾಡಿದರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು ಎಂದು ಕಾರವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಘೋಷಿಸಿದರು.ಕಾರವಾರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಕೆಡಿಪಿ ಸಭೆಯ ನಂತರ ಪತ್ರಿಕಾಗೋಷ್ಠಿ ಮಾಡಿದ ಅವರು ನಮ್ಮ ಸರ್ಕಾರದಲ್ಲಿ ಗೋವು ಕಳ್ಳತನ ಮಾಡಿದವರನ್ನು ಹಿಡಿದು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿದ್ದೇವೆ. ಕಾನೂನು ಉಲ್ಲಂಘಿಸಿದವರನ್ನು ಹೇಗೆ ಶಿಕ್ಷಿಸಿದ್ದೇವೆ ಎಂಬುದನ್ನು ಸಮಾಜ ನೋಡಿದೆ. ಮುಂದೆ ಗೋವು ಕಳ್ಳತನ ಮಾಡಿದರೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾರಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ , ಗೃಹಮಂತ್ರಿ ಬಗ್ಗೆ ಕುಮಟಾ ಶಾಸಕ ದಿನಕರ ಖಾನ್ ಹಗುರವಾಗಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಬಿಜೆಪಿ ಸರ್ಕಾರದ ಇದ್ದಾಗ ನಡೆದ ಗೋಕಳ್ಳರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ? ಗೋವು ಕಳೆದುಕೊಂಡವರಿಗೆ ಎಷ್ಟು ಪರಿಹಾರ ನೀಡಿದ್ದಾರೆಂದು ಹೇಳಲಿ ನೋಡೋಣ ಎಂದು ಸವಾಲು ಹಾಲಿದರು. ಮುಖ್ಯ ಮಂತ್ರಿ, ಗೃಹಮಂತ್ರಿಗಳು ಗೋ ಕಳ್ಳರಿಗೆ ಸಹಕಾರ ನೀಡಿದ್ದಾರೆಂದು ದಿನಕರ ಶೆಟ್ಟಿ ಎನೇನೋ ಮಾತಾಡಿದ್ದಾರೆ. ಬಿಜೆಪಿಯವರಿಗೆ ಬಾಯಿಗೆ ಬಂದಂತೆ ಮಾತಾಡಿ, ಸುಳ್ಳು ಹೇಳುವುದು ಬಿಟ್ಟರೆ ಏನು ಬರುತ್ತದೆ. ನಾವು ಮತ್ತು ನಮ್ಮ ಸರ್ಕಾರ ಬಿಗಿ ಕ್ರಮ ಕೈಗೊಂಡದ್ದರಿಂದ ಸಾಲಕೋಡು ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಹಿಡಿಯಲಾಗಿದೆ. ತಪ್ಪಿಸಿಕೊಂಡ ಇನ್ನಿಬ್ಬರ ಸೆರೆಗೆ ಪ್ರಯತ್ನ ನಡೆದಿದೆ ಎಂದ ಸಚಿವ ವೈದ್ಯ ಎಸ್ಪಿ ಹಾಗೂ ಪೊಲೀಸರ ಕ್ರಮವನ್ನು ಮೆಚ್ಚಿದರು.