ಪ್ರಪಂಚದಲ್ಲಿ ವಿಜ್ಞಾನದ ಅವಿಷ್ಕಾರಗಳಿಲ್ಲದಿದ್ದರೇ ಮನುಷ್ಯನ ಬದುಕು ಕ್ಷೀಣಿಸುತ್ತಿತ್ತು : ಕೆ ಎ ಬಳಿಗೇರ

If there were no scientific discoveries in the world, the life of man would have declined: K A Nearg

ಪ್ರಪಂಚದಲ್ಲಿ ವಿಜ್ಞಾನದ ಅವಿಷ್ಕಾರಗಳಿಲ್ಲದಿದ್ದರೇ ಮನುಷ್ಯನ ಬದುಕು ಕ್ಷೀಣಿಸುತ್ತಿತ್ತು : ಕೆ ಎ ಬಳಿಗೇರ 

ಶಿರಹಟ್ಟಿ  15: ಪ್ರಪಂಚದಲ್ಲಿ ವಿಜ್ಞಾನದ ಅವಿಷ್ಕಾರಗಳಿಲ್ಲದಿದ್ದರೇ ಮನುಷ್ಯನ ಬದುಕು ಕ್ಷೀಣಿಸುತ್ತಿತ್ತು, ಈ ಹಿನ್ನೆಲೆಯಲ್ಲಿ ನಾಗರಿಕತೆ ಮತ್ತು ದೇಶದ ಅಭಿವೃದ್ಧಿಗೆ ವಿಜ್ಞಾನದ ಅವಶ್ಯಕತೆ ಬಹಳಷ್ಟಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ವಿಜ್ಞಾನಕ್ಕೆ ಮಹತ್ವ ನೀಡಿದ್ದರಿಂದಲೇ ಇಂದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ ಎಂದು ಕಸಾಪ ಗದಗ ಜಿಲ್ಲಾ ಅಧ್ಯಕ್ಷ ಕೆ ಎ. ಬಳಿಗೇರ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಶನಿವಾರ ಪಟ್ಟಣದ ಸೆಂಟ್ ಜೊಸೆಫ್‌ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಏರಿ​‍್ಡಸಿದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವಿಜ್ಞಾನದ ಹೊಸ ಅವಿಷ್ಕಾರಗಳಿಂದ ವೇಗವಾಗಿ ಬೆಳೆಯುತ್ತಿರುವ ಪ್ರಪಂಚಕ್ಕೆ ಮೂಲ ಸೌಕರ‌್ಯಗಳು ಸೇರಿದಂತೆ ಸಮಾಜ ನಿಯಂತ್ರಣಕ್ಕೆ ತರಲು ಸಾಧ್ಯ ವಿಶ್ವದ ಬಹುತೇಕ ಧನಾತ್ಮಕ ಮತ್ತು ??ಣಾತ್ಮಕ ಬೆಳವಣಿಗೆಗಳಿಗೆ ವೆ?ಜ್ಞಾನಿಕ ಹೊಸ ಅನ್ವೆ?ಷಣೆಗಳೇ ತಳಹದಿಯಾಗಿವೆ ಎಂದರು.ಕೃಷಿ ಪ್ರಧಾನ ಭಾರತದಲ್ಲಿಯೂ ಪ್ರತಿಭಾನ್ವಿತ ವಿಜ್ಞಾನಿಗಳು ವಿಶ್ವದಾಖಲೆಯೊಂದಿಗೆ ಇಡೀ ವಿಶ್ವವನ್ನೆ ಬೆರಗಾಗುವಂತೆ ಮಾಡಿದ್ದಾರೆ, ಸಂಪ್ರದಾಯ ರಾಷ್ಟ್ರ ಭಾರತದಂತಹ ದೇಶದ ಮಹಿಳಾ ವಿಜ್ಞಾನಿಗಳ ಪ್ರಸ್ತುತ ಸಾಧನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವುದು ಪ್ರಶಂಸನೀಯ ಎಂದರು.ಈ ಸಂದರ್ಭದಲ್ಲಿ ಮಾಜಿ ಪ ಪಂ. ಅಧ್ಯಕ್ಷ ಹುಮಾಯೂನ್ ಮಾಗಡಿ, ಸ್ಥಾಯಿ ಸಮಿತಿ ಚೇರಮನ್ ಹೊನ್ನಪ್ಪ ಶಿರಹಟ್ಡಿ, ಪಟ್ಟಣ ಪಂಚಾಯತ್ ಸದಸ್ಯ ಸಂದೀಪ ಕಪ್ಪತ್ತವರ, ಸಿ ಆರ್‌. ಪಿ ಸಾವಿರಕುರಿ, ಮಾಬುಸಾಬ ಲಕ್ಷ್ಮೇಶ್ವರ,ಎಸ್ ಎಸ್ ಸಾಮ್ರಾಟ್, ಸುಖಲತಾ ಸಾಮ್ರಾಟ್, ಆರ್ ಎಚ್‌. ಬೆನಹಾಳ ಹಾಗೂ ಅನೇಕರು ಇದ್ದರು.