ವಾಹನ ದಾಖಲೆ ಮೊಬೈಲ್ನಲ್ಲಿದ್ದರೆ ಸಾಕು ಆದರೆ ಫಾಸ್ಟ್ಯಾಗ್ ಕಡ್ಡಾಯ

ಹೊಸದಿಲ್ಲಿ 18: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಇತ್ಯಾದಿ ದಾಖಲೆಗಳನ್ನು ಹೊತ್ತೂಯ್ಯಬೇಕಾಗಿಲ್ಲ. ಮೊಬೈಲ್ನಲ್ಲೇ ಡಿಜಿ ಲಾಕರ್ ನಲ್ಲಿ ಅವುಗಳನ್ನೆಲ್ಲ ಇಟ್ಟುಕೊಂಡು, ಅಧಿಕಾರಿಗಳು ಕೇಳಿದಾಗ ಅದನ್ನೇ ತೋರಿಸಿದರೆ ಸಾಕು! ಕೇಂದ್ರ ಮೋಟಾರು ವಾಹನ ನಿಯಮಾವಳಿಗಳಿಗೆ ತರಲಾದ ತಿದ್ದುಪಡಿಯಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಈ ಹೊಸ ನಿಯಮಗಳು ವಾಹನಗಳ ಮಾಲಕರಿಗೆ ನೆಮ್ಮದಿ ತರಲಿವೆ. ಇದಲ್ಲದೆ ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, 8 ವರ್ಷ ಮೀರಿದ ವಾಹನಗಳ ಪರವಾನಿಗೆ ನವೀಕರಣ, ಸರಕು ಸಾಗಣೆ ಮತ್ತಿತರ ವಿಚಾರಗಳಿಗೂ ಸಂಬಂಧಿಸಿದ ಅನೇಕ ಪ್ರಸ್ತಾವಗಳನ್ನು ರಸ್ತೆ ಸಾರಿಗೆ ಸಚಿವಾಲಯ ಇದರಲ್ಲಿ ಸೇರಿಸಿದೆ. 

ಆ.11ರೊಳಗೆ ಪ್ರತಿಕ್ರಿಯಿಸಿ: ಸಾರ್ವಜನಿಕರು ಈ ತಿದ್ದುಪಡಿ ಪ್ರಸ್ತಾವಕ್ಕೆ ಪ್ರತಿಕ್ರಿಯೆ, ಸಲಹೆ ಹಾಗೂ ಆಕ್ಷೇಪಗಳಿದ್ದರೆ ಆ.11ರೊಳಗೆ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಪ್ರತಿಕ್ರಿಯೆಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದಶರ್ಿಗೆ (ಸಾರಿಗೆ) ಕಳುಹಿಸುವಂತೆ ಹೇಳಿದೆ.

ವಾಹನ ಚಾಲಕರು ಚಾಲನಾ ಪರವಾನಿಗೆ, ಆರ್ಸಿ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲೂ ಒಯ್ಯ ಬಹುದು. 

ರಾಷ್ಟ್ರೀಯ ಪರವಾನಿಗೆ ಹೊಂದಿರುವ ಎಲ್ಲ ವಾಣಿಜ್ಯ ವಾಹನ ಗಳಿಗೂ ಫಾಸ್ಟಾಗ್ಗಳು, ವಾಹನ ಟ್ರ್ಯಕಿಂಗ್ ವ್ಯವಸ್ಥೆ ಕಡ್ಡಾಯ. 

ರಾಷ್ಟ್ರೀಯ ಪಮರ್ಿಟ್ ಪಡೆಯಬೇಕೆಂದರೆ, ವಾಹನದ ಮುಂಭಾಗ, ಹಿಂಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ  ನ್ಯಾಶನಲ್ ಪಮರ್ಿಟ್ ಅಥವಾ ಎನ್/ಪಿ ಎಂದು ಬರೆಯುವುದು ಕಡ್ಡಾಯ. 

ಅಪಾಯಕಾರಿ ಅಥವಾ ಹಾನಿಕಾರಕ ಸರಕುಗಳನ್ನು ಒಯ್ಯುವ ಟ್ಯಾಂಕರ್ ಗಳಿಗೆ ಬಿಳಿ ಬಣ್ಣವನ್ನೇ ಬಳಿಯಬೇಕು. ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫಲಿತ ಟೇಪ್ ಅಂಟಿಸಬೇಕು.