ಸತ್ಯ ನುಡಿದರೆ, ನಿಮ್ಮನ್ನು ಹುಚ್ಚ ಎನ್ನಲಾಗುತ್ತದೆ: ಯೂನಿಸ್

ಲಾಹೋರ್, ಮೇ 25,ಪಾಕಿಸ್ತಾನಕ್ಕೆ ಐಸಿಸಿ ಟಿ20 ವಿಶ್ವ ಕಪ್ ಗೆದ್ದುಕೊಟ್ಟ ಕೆಲವು ದಿನಗಳಲ್ಲಿ ನಾಯಕತ್ವ ತ್ಯಜಿಸಿದ ಮಾಜಿ ನಾಯಕ ಯೂನಿಸ್ ಖಾನ್, ತಾವು ನಾಯಕತ್ವ ತ್ಯಜಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ಸತ್ಯ ಹೇಳಿದರೆ, ನಿಮ್ಮನ್ನು ಹುಚ್ಚ ಎಂದು ಪರಿಗಣಿಸುತ್ತಾರೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.ನಾಯಕತ್ವದ ಕುರಿತು ಗಲ್ಫ್ ನ್ಯೂಸ್ ಜತೆ ಮಾತನಾಡಿರುವ ಯೂನಿಸ್ ಖಾನ್, ಸತ್ಯ ಹೇಳಿದ ನಂತರ ನಿಮ್ಮನ್ನು ಹುಚ್ಚು ಮನುಷ್ಯ ಎಂದು ಕರೆದಿರುವ ಸನ್ನಿವೇಶಗಳನ್ನು  ನಿಮ್ಮ ಜೀವನದಲ್ಲಿ ಸಾಕಷ್ಟು ಕಂಡಿದ್ದೀರಿ ಎಂಬ ಪ್ರಶ್ನೆಗೆ ಕೆಲವು ಆಟಗಾರರ ಗುಂಪು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲಎಂದು ಸೂಚಿಸಿದ್ದು, ನನ್ನ ತಪ್ಪಾಯಿತು ಎಂದು ಹೇಳಿಕೊಂಡಿದ್ದಾರೆ.ಕೆಲ  ಸಮಯದ ನಂತರ ಆ ಆಟಗಾರರು ತಮ್ಮ ತಪ್ಪಿಗೆ ವಿಷಾಧಿಸಿದ್ದರು. ನಂತರ ನಾವೆಲ್ಲ ಒಂದು ತಂಡವಾಗಿ ಒಟ್ಟಿಗೆ ಆಡಿದ್ದೇವೆ. ಸತ್ಯ ಹೇಳುವುದು ಮತ್ತು ವಿನಮ್ರವಾಗಿರುವುದು ನಾನು ನನ್ನ ತಂದೆಯಿಂದ ಕಲಿತ ಪಾಠವಾಗಿದೆ ಎಂದಿದ್ದಾರೆ.