ಮೆಲ್ಬೋರ್ನ್, ಏ 10,ಜಾಗತಿಕವಾಗಿ ಹರಡಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ ಪ್ರೇಕ್ಷಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಒಂದು ವೇಳೆ ಇದು ತೀವ್ರಗೊಂಡು ಆಡುವ ಪರಿಸ್ಥಿತಿ ಎದುರಾದರೆ ಖಾಲಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಮನಸಿಲ್ಲ ಎಂದು ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.ಈ ಮೂಲಕ ಪ್ರೇಕ್ಷಕರನ್ನು ಹೊರಗಿಟ್ಟು ಐಪಿಎಲ್ ನಡೆಸಲು ಚಿಂತಿಸುತ್ತಿರುವ ಬಿಸಿಸಿಐಗೆ ವಿದೇಶಿ ಆಟಗಾರರ ಪೂರ್ಣ ಲಭ್ಯತೆ ದೊರೆಯುವ ಸಾಧ್ಯತೆ ತಗ್ಗುವ ಮುನ್ಸೂಚನೆ ಎದುರಾದಂತಾಗಿದೆ.ಕಳೆದ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ 13ನೇ ಆವೃತ್ತಿ ಕೋವಿಡ್ -19ನಿಂದಾಗಿ ಏಪ್ರಿಲ್ 15ಕ್ಕೆ ಮುಂದೂಡಿಕೆಯಾಗಿದೆ. ಈ ಮಧ್ಯೆ ದೇಶದಲ್ಲಿ ನಿತ್ಯ ಕೋವಿಡ್ -19ಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಐಪಿಎಲ್ ನಡೆಯುವ ಬಗ್ಗೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಬಿಸಿ ಸ್ಪೋರ್ಟ್ಸ್ ಜತೆ ಮಾತನಾಡಿರುವ ಕಮಿನ್ಸ್, ಆದಾಗ್ಯೂ ಟೂರ್ನಿ ನಡೆಯುವ ಕುರಿತು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಮೊದಲ ಆದ್ಯತೆಯು ಸುರಕ್ಷತೆಯಾಗಿದೆ ಆದರೆ ಎರಡನೆಯದು ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದಾಗಿದ್ದು, ಅದು ಸಮತೋಲನವನ್ನು ಕಂಡುಕೊಳ್ಳುತ್ತದೆ" ಎಂದು ಅವರು ಹೇಳಿದ್ದಾರೆ. "ದುರದೃಷ್ಟವಶಾತ್ ಸ್ವಲ್ಪ ಸಮಯದವರೆಗೆ ಜನಸಂದಣಿ ಇಲ್ಲ ಎಂದರ್ಥ, ಆದರೆ ಜನರು ಮನೆಯ ಟಿವಿಯಲ್ಲಿ ವೀಕ್ಷಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.ವರ್ಷದ ವಿಸ್ಡನ್ ಐವರು ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕಮಿನ್ಸ್, ಒಂದು ವೇಳೆ ಪ್ರೇಕ್ಷಕರನ್ನು ಹೊರಗಿಟ್ಟು ಐಪಿಎಲ್ ನಡೆದರೆ ಇದೊಂದು ವಿಶೇಷ ಟೂರ್ನಿ ಹಾಗೂ ಹೊಸ ಅನುಭವವನ್ನು ನೀಡಲಿದೆ ಎಂದಿದ್ದಾರೆ.