ವಿಜಯಪುರ ಮೇ.07 : ಲಾಕ್ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ/ಕಾಡರ್ುದಾರರಿಗೆ ಆಹಾರಧಾನ್ಯಗಳ ಕೊರತೆಯಾಗ ದಂತಿರಲು ವಿತರಿಸಲಾಗುತ್ತಿರುವ ಆಹಾರಧಾನ್ಯಗಳನ್ನು ಕೆಲವರು ಲಾಭದ ಆಸೆಗಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾಡರ್ುದಾರರು/ನ್ಯಾಯಬೆಲೆ ಅಂಗಡಿದಾರರು ಸಕರ್ಾರದಿಂದ ಉಚಿತವಾಗಿ ಪಡೆದ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಅಥವಾ ಇತರೆ ಯಾವುದೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದು, ಕಂಡುಬಂದಲ್ಲಿ ಅಂತಹ ಮಾರಾಟ ಮಾಡಿದ ಹಾಗೂ ಖರೀದಿಸಿದ ವ್ಯಕ್ತಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಮ ಜರುಗಿಸಲಾಗುವುದು. ಹಾಗೂ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು, ನಿಯಮಾನುಸಾರ ಇಂತಹ ವ್ಯಕ್ತಿಗಳಿಗೆ ಏಳು ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಅದರಂತೆ ಎಪ್ರೀಲ್ ತಿಂಗಳಲ್ಲಿ ಬಿ.ಪಿ.ಎಲ್ ಕಾಡರ್್ದಾರರಿಗೆ ಪ್ರತಿ ಯೂನಿಟ್ಗೆ 10 ಕೆ.ಜಿ ಅಕ್ಕಿ ಹಾಗೂ ಪ್ರತಿ ಕಾಡರ್್ಗೆ 4 ಕೆ.ಜಿ ಗೋಧಿ ಹಾಗೂ ಅಂತ್ಯೋದಯ ಅನ್ನ ಯೋಜನೆ ಕಾಡರ್ುದಾರರ ಪ್ರತಿ ಕಾಡರ್ಿಗೆ 70 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿರುತ್ತದೆ. ಅಲ್ಲದೇ ಮೇ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ ಪ್ರತಿ ಯೂನಿಟ್ಗೆ 10 ಕೆ.ಜಿ ಅಕ್ಕಿ ಮತ್ತು ಪ್ರತಿ ಕಾರ್ಡಗೆ 1 ಕೆ.ಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಕರ್ಾರವು ವಿತರಿಸುತ್ತಿರುವ ಉಚಿತ ಪಡಿತರ ಆಹಾರಧಾನ್ಯ ಮಾರಾಟ ಮಾಡುವ ಪಡಿತರ ಚೀಟಿದಾರರು, ಖರೀದಿದಾರರು ಹಾಗೂ ಸಂಗ್ರಹಣೆ ಮಾಡುವವರ ಬಗ್ಗೆ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ದೂರವಾಣಿ ಸಂಖ್ಯೆ : 08352-250419ಗೆ ಕರೆ ಮಾಡಿ ತಿಳಿಸಬಹುದು, ಜಿಲ್ಲಾಡಳಿತಕ್ಕೆ ತಿಳಿಸಿದವರ ವಿಷಯವನ್ನು ಗುಪ್ತವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕ್ವಾರೈಂಟೈನ್ ವ್ಯವಸ್ಥೆಗೆ ನೋಡಲ್ ಅಧಿಕಾರಿಗಳ ನಿಯೋಜನೆ: ಜಿಲ್ಲಾಧಿಕಾರಿ
ಹಾವೇರಿ: ಮೇ 07: ವಿದೇಶದಿಂದ ಜಿಲ್ಲೆಗೆ ಆಗಮಿಸುವ ಯಾತ್ರಿಕರು, ಪ್ರಯಾಣಿಕರು, ವಿದ್ಯಾಥರ್ಿಗಳು ಹಾಗೂ ನಾಗರಿಕರಿಗೆ ಸ್ಟ್ಯಾಂಡಡರ್್ ಆಪರೇಷನ್ ಫ್ರೊಸಿಜರ್(ಎಸ್.ಓ.ಪಿ) ಪ್ರಕಾರ ಗಡಿ ಭಾಗದಲ್ಲಿ ತಪಾಸಣೆ ನಡೆಸಿ ಕ್ವಾರೈಂಟೈನ್ ಪ್ರಕ್ರಿಯೆ ಕೈಗೊಳ್ಳಲು ಉಸ್ತುವಾರಿ ತಂಡಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.
ಆರೋಗ್ಯ ತಪಾಸಣೆಯ ಮೇಲುಸ್ತುವಾರಿಗೆ ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ಜಗದೀಶ್ ಪಾಟೀಲ್ ಅವರು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ವೈದ್ಯಕೀಯ ತಂಡದೊಂದಿಗೆ ಚೆಕ್ಪೋಸ್ಟ್ನಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವುದು, ಥರ್ಮಲ್ ಸ್ಕ್ಯಾನಿಂಗ್, ಫಲ್ಸ್ಆಕ್ಸಿ ಮೀಟರ್ ಬಳಸುವುದು, ಡಿಕ್ಲರೇಶನ್ ಫಾರಂ ಪರಿಶೀಲಿಸುವುದು, ಕ್ವಾರೈಂಟೈನ್ ಅವಧಿ ನಿರ್ಧರಿಸುವುದು, ಕೋವಿಡ್ ಕೇರ್ ಸೆಂಟರ್ಗೆ ಹೋಗಲು ಅಂಬ್ಯುಲೇನ್ಸ್ ಸೌಲಭ್ಯ ಒದಗಿಸುವುದು, ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸುವುದು, ಕ್ವಾರೈಂಟೈನ್ ಸೆಂಟರ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ನಿರ್ವಹಣೆ, ಪ್ರತಿ ಪ್ರಯಾಣಿಕನಿಗೆ ನಿಗಧಿತ ನಮೂನೆಗಳನ್ನು ಭತರ್ಿ ಮಾಡಿಕೊಳ್ಳುವ ಕಾರ್ಯದ ನಿರ್ವಹಣೆ ಹಾಗೂ ಅಗತ್ಯ ಸಿಬ್ಬಂದಿಗಳ ನಿಯೋಜನೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ತಹಶಿಲ್ದಾರಗಳ ಉಸ್ತುವಾರಿಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಆರೋಗ್ಯ ಸೇತು, ಕ್ವಾರೈಂಟೈನ್ ವಾಚ್, ಆಪ್ತಮಿತ್ರ ಆ್ಯಪ್ಗಳನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡುವುದು, ಒಂದೊಮ್ಮೆ ಆ್ಯಪ್ಗಳನ್ನು ಡೌನ್ಲೋಡ್ಮಾಡಿಸಿ ಮಾಹಿತಿ ತುಂಬಿಸುವುದು, ಕ್ವಾರೈಂಟೈನ್ ಸೀಲ್ ಹಾಕುವುದು, ಚೆಕ್ಲೀಸ್ಟ್ನಲ್ಲಿ ಯಾತ್ರಿಕರ ವಿವರ ದಾಖಲಿಸುವುದು, ಚೆಕ್ಪೋಸ್ಟ್ ಸಿಬ್ಬಂದಿಗಳಿಗೆ ಲಘು ಉಪಹಾರ ವ್ಯವಸ್ಥೆ, ಪ್ರತಿ ಕ್ವಾರೈಂಟೈನ್ ಸೆಂಟರ್ಗೆ ನೇಮಿಸಿದ ನೋಡಲ್ ಅಧಿಕಾರಿಯು ತಮ್ಮ ಸೆಂಟರ್ಗೆ ಹಂಚಿಕೆ ಮಾಡಿದ ಪ್ರಯಾಣಿಕರನ್ನು ಕರೆದೊಯ್ಯುವ ಕುರಿತಂತೆ ಉಸ್ತುವಾರಿ ವಹಿಸಿ ಅಗತ್ಯ ಸಿಬ್ಬಂದಿಯ ನಿಯೋಜನೆ ಹೊಣೆಗಾರಿಕೆ ನೀಡಲಾಗಿದೆ.
ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಚೆಕ್ಪೋಸ್ಟ್ನಲ್ಲಿ ಸಬ್ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಲು ಜವಾಬ್ದಾರಿ ವಹಿಸಲಾಗಿದೆ.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗೀಯ ನಿಯಂತ್ರಕರ ಉಸ್ತುವಾರಿಯಲ್ಲಿ ಚೆಕ್ಪೋಸ್ಟ್ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ನಿಂದ ಬರುವ ಪ್ರಯಾಣಿಕರ ಮಾಹಿತಿಯನ್ನು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮುಂಚಿತವಾಗಿ ತಿಳಿಸುವುದು, ಮಾಕನೂರ, ರಾಣೆಬೆನ್ನೂರ, ಹಾವೇರಿ, ಶಿಗ್ಗಾಂವಗಳಲ್ಲಿ ಮಾತ್ರ ಸಂಬಂಧಪಟ್ಟ ಪ್ರಯಾಣಿಕರು ಇಳಿಯುವಂತೆ ನೋಡಿಕೊಳ್ಳುವುದು, ಸದರಿ ಪ್ರಯಾಣಿಕರು ತಮ್ಮ ತಾಲೂಕುಗಳಿಗೆ ಹೋಗಲು ಸೂಕ್ತ ಬಸ್ ವ್ಯವಸ್ಥೆ ಮಾಡುವ ಹೊಣೆಯನ್ನು ನೀಡಲಾಗಿದೆ.
ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಕಛೇರಿ ಅಧೀಕ್ಷಕರಿಗೆ ಚೆಕ್ಪೋಸ್ಟ್ನಲ್ಲಿ ಲಘು ಉಪಹಾರ ಕ್ವಾರಂಟೈನ್ ಸೆಂಟರ್ಗಳಲ್ಲಿ ಆಹಾರ ತಯಾರಿಕೆ ಅಗತ್ಯ ಸಾಮಗ್ರಿ, ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿ ವಹಿಸಲಾಗಿದೆ.
ಉಪ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಚೆಕ್ಪೋಸ್ಟ್ನಿಂದ ಕ್ವಾರಂಟೈನ್ ಸೆಂಟರ್ಗೆ ಎ ಮತ್ತು ಬಿ ವಗರ್ೀಕರಣದ ಪ್ರಯಾಣಿಕರು ಹೋಗಲು ಅಗತ್ಯವಿದ್ದಲ್ಲಿ ವಾಹನ ಒದಗಿಸುವ ಜವಾಬ್ದಾರಿ ನೀಡಲಾಗಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಅಭಿಯಂತರರಿಗೆ ಚೆಕ್ಪೋಸ್ಟ್ಗಳ ಸ್ವಚ್ಛತಾ ಕಾರ್ಯ ಮೇಲ್ವಿಚಾರಣೆ ನಡೆಸಲು ಸೂಚಿಸಲಾಗಿದೆ.
ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳ ಉಸ್ತುವಾರಿಯಲ್ಲಿ ಕ್ವಾರಂಟೈನ್ ಸೆಂಟರ್ನಲ್ಲಿ ಇರುವ ಯಾತ್ರಿಕರು, ಪ್ರಯಾಣಿಕರು, ವಿದ್ಯಾಥರ್ಿಗಳು, ಪ್ರವಾಸಿಗಳು ಹಾಗೂ ನಾಗರೀಕರ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಲು ತಿಳಿಸಿದೆ.
ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಾಸ್ಟೇಲ್ಗಳಲ್ಲಿ ಅಡುಗೆಯವರು, ಸಹಾಯಕರು ಮತ್ತು ಇತರೆ ಸಿಬ್ಬಂದಿಗಳನ್ನು ನೇಮಿಸಿ ಕ್ವಾರಂಟೈನ್ನಲ್ಲಿ ಇರುವ ಜನರಿಗೆ ಆಹಾರ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಜಿಲ್ಲಾ ಅಂಗವೀಕಲ ಕಲ್ಯಾಣಾಧಿಕಾರಿಗಳಿಗೆ ಕ್ವಾರಂಟೈನ್ ಆ್ಯಪ್ನಲ್ಲಿ ದಾಖಲಾಗುವ ಪ್ರತಿದಿನದ ಫೋಟೋಗಳನ್ನು ಪರಿಶೀಲಿಸಿ ವರದಿ ನೀಡಲು ತಿಳಿಸಲಾಗಿದೆ.
ಎನ್.ಐ.ಸಿ ಸಮಾಲೋಚಕರು ಆ್ಯಪ್ ಸಂಬಂಧಿ ಪ್ರತಿನಿತ್ಯದ ವರದಿಯನ್ನು ಸಕರ್ಾರಕ್ಕೆ ಕಳುಹಿಸಿಕೊಡುವ ಜವಾಬ್ದಾರಿ ಉಸ್ತುವಾರಿ ವಹಿಸಿ ಆದೇಶ ಹೊರಡಿಸಿದ್ದಾರೆ