ಲೋಕದರ್ಶನ ವರದಿ
ಖಾಸ್ಗತ ಶಿವಯೋಗಿಗಳಪ್ರಧಾನ ವೇದಿಕೆ(ದಿ.ವೀರಸಂಗಪ್ಪ ಹಗರಟಗಿ ಮಹಾ ಮಂಟಪ) ತಾಳಿಕೋಟೆ : ಶಿವಲೋಕದಿಂದ ಒಬ್ಬ ಸಾದು ಬಂದಾನೋ ಎಂಬುದು ಖಾಸ್ಗತ ಶಿವಯೋಗಿಗಳ ಕುರಿತು ಶಿಶುನಾಳ ಶರೀಪರು ಹೇಳಿದ್ದಾರೆಂದು ಮಾಧ್ಯಮ ಸಲಹೆಗಾರ ನಾಡೋಜ ಡಾ.ಮಹೇಶ ಜೋಶಿ ಅವರು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಳಿಕೋಟೆ ಇವರ ಸಹಯೋಗದಲ್ಲಿ ತಾಳಿಕೋಟೆಯಲ್ಲಿ ಆಯೋಜಿಸಲಾದ ವಿಜಯಪುರ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ(4)ರ ಅನುಭಾವ ಗೋಷ್ಠಿಯಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕನ್ನಡ ನಾಡು ಸಿದ್ದಪುರುಷರ ನಾಡು ಅನೇಕ ಯೋಗಿಗಳು ಅನೇಕ ಋಷಿ ಮುನಿಗಳು ಹುಟ್ಟಿರುವಂತಹ ಈ ಕನ್ನಡ ನಾಡು ಇದೆ ಸಮಯ ದೃಷ್ಠಿಯಿಂದ ಸಮ ಚಿತ್ತದಿಂದ ಹುಟ್ಟಿದಂತಹ ಕವಿಗಳ ನಾಡಿದು ಶರೀಪರು ಸಣ್ಣವರು ಇದ್ದಾಗ ಮನೆಯಲ್ಲಿ ಇದ್ದಾಗ ಉದರ್ು ಭಾಷೆ ಓದಿದ್ದು ಕನ್ನಡ ಭಾಷೆಯಲ್ಲಿ ಬೆಳೆದು ಬಂದಿರುವವರು ಶಿಶುನಾಳ ಶರೀಪರು ಆಗಿದ್ದಾರೆ ತಾಳಿಕೋಟೆಯ ಶ್ರೀಗಳು ಸದ್ಗತಿ ಹೊಂದಿದವರು ಹುಬ್ಬಳ್ಳಿಯ ಸಿದ್ದಾರೂಡರ ಸಮಕಾಲಿನವರಾಗಿದ್ದಾರೆ ಶ್ರೀ ಖಾಸ್ಗರು ಎಂದರು. ಶಿವಲೋಕದಿಂದ ಒಬ್ಬ ಸಆದು ಬಂದಾನೆಂಬ ಶರೀಪರ ತತ್ವ ಪದಹಾಡಿದ ಡಾ.ಮಹೇಶ ಜೋಶಿ ಅವರು ಅಂತಹ ಶಿವಯೋಗಿಗಳು ಅನೇಕ ಯೋಗಿಗಳು ಋಷಿಮುನಿಗಳು ತತ್ವಜ್ಞಾನಿಗಳು ಹುಟ್ಟಿರತ್ತಕ್ಕಂತಹ ನೆಲ ಕನ್ನಡ ನೆಲವಾಗಿದೆ ಸಮಾನತೆಯ ಹರಿಕಾರರು ಕಬೀರರು 2018 ಜೂಲೈ 2 ಕ್ಕೆ ದ್ವಿಶತಮಾನದ ಜನ್ಮದಿನವಾಗಿದೆ 19 ನೇ ಶತಮಾನ ಶಿಶುವಿನ ಗ್ರಾಮ ಅಂತರಾಜ್ಯಮಟ್ಟದಲ್ಲಿ ಹೆಸರು ಪಡೆದಿದೆ ಎಂದರು. ಸರ್ವಧರ್ಮ ಸಂಸ್ಕೃತಿಯನ್ನು ಅಳವಡಿಸಿ ಕೊಂಡವರು ಶರೀಪರ ತಂದೆ ತಾಯಿಗಳಾಗಿದ್ದಾರೆಂದರು ಎಲ್ಲ ಧರ್ಮದ ಬಗ್ಗೆ ಇಮಾಮಸಾಹೇಬರು ತಿಳಿದುಕೊಂಡವರಾಗಿದ್ದರು ಆದರೆ ಅವರಿಗೆ ಒಂದು ಕೊರಗು ಮಕ್ಕಳಾಗಿಲ್ಲವೆಂಬುದಾಗಿತ್ತು ಆ ಚಿಂತಯಿಂದ ಸೈಯದಶಾ ಖಾದ್ರಿ ಸಂತರ ಬಳಿಗೆ ಹೋಗುತ್ತಾನೆ ಅಂತಹ ಖಾದರಲಿಂಗ ಅವರ ಆಶಿವರ್ಾದದಿಂದ ಜನ್ಮ ತಾಳಿದ ಶರೀಪರು ಶಿಶುನಾಳ ಶರೀಪರು 70 ವರ್ಷಗಳ ಕಾಲ ಬಧುಕಿದ್ದರೂ ರಾಘವೇಂದ್ರರಂತೆ ಅವರೂ ಸಹ ದೇಹಬಿಡುವ ಕಾಲಕ್ಕೆ ಸೂಚನೆ ನೀಡಿ ವೃಂದಾವನ ಕಟ್ಟಿಸಿಕೊಂಡವರೆಂದರು. ಖಾದರ ಅವರ ನಾಗಲಿಂಗರಡ್ಡಿ ಅವರ ವ್ಯಕ್ತಿತ್ವ ಕುರಿತು ತಿಳಿ ಹೇಳಿದ ಜೋಶಿ ಅವರು ಗೌರವ ಹೊಂದಿದ ಶರೀಪ ಖಾದರಲಿಂಗನನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು ಶರೀಪರು ಪ್ರಭುಲಿಂಗ ಲೀಲಾ ಆಳವಾಗಿ ಅಧ್ಯಯನ ಮಾಡಿದವರಾಗಿದ್ದರೆಂದರು. ಹಿಂದೂ-ಮುಸ್ಲಿಂ ಧರ್ಮಕ್ಕೆ ಕಳಸ ಇಟ್ಟವರಾಗಿದ್ದಾರಲ್ಲದೇ ಮಾನವೀಯತೆ ಶ್ರೇಷ್ಠವೆಂದು ಧರ್ಮದ ಮೇಲೆ ಕಳಸವನ್ನಿಟ್ಟಂತವರು ಗುರುಗೋವಿಂದ ಬಟ್ಟರು ಆಗಿದ್ದಾರೆಂದು ಹೇಳಿದ ಅವರು ಶರೀಪರು ಹಾಗೂ ಗೋವಿಂದಬಟ್ಟರು 70 ವರ್ಷ ಬಾಳುತ್ತಾರೆಂದು ಯೋಗ್ಯವಾದ ಶಿಷ್ಯನಿಗೆ ಯೋಗ್ಯ ಗುರು ಸಿಗುವದು ಬಹಳೇ ವಿರಳವೆಂದ ಅವರು ಗೋವಿಂದ ಬಟ್ಟರ ಬಗ್ಗೆ ಶರೀಪರು 20 ಪಧ್ಯಗಳನ್ನು ಬರೆಯುತ್ತಾರೆಂದು ಪಧ್ಯಗಳ ಬಗ್ಗೆ ವಿವರಿಸಿದರು.
ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ): ಸಾಹಿತ್ಯ ಸಮ್ಮೇಳನ ನಿಜವಾದ ಸಾಹಿತ್ಯಾಸಕ್ತರ ಸಮ್ಮೇಳ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ ನಮ್ಮ ನೆಲ ಜಲ ಭಾಷೆಯ ಬಗ್ಗೆಯೂ ಗೋಷ್ಠಿಗಳಾಗಬೇಕು ಅಂದರೆ ಮಾತ್ರ ಪರಿಹಾರ ಕಂಡು ಹಿಡಿಯಲು ಸಾಧ್ಯವೆಂದರು. ಜಿಲ್ಲಾ ಪರಿಷತ್ನ ನಿರ್ಣಯ ಜಿಲ್ಲೆ ಸಮಗ್ರ ನೀರಾವರಿ ಯಾಗಬೇಕೆಂಬುದರ ಬಗ್ಗೆ ಅಧ್ಯಕ್ಷರು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆಂದರು. 729 ಟಿಎಂಸಿ ನೀರಿನಲ್ಲಿ ಉಳಿದ ನೀರಿನಲ್ಲಿ ರಾಜ್ಯದಲ್ಲಿ ಬಳಿಸಿಕೊಳ್ಳಬಹುದೆಂದು ಬಚಾವತ್ ತೀಪರ್ಿನಲ್ಲಿ ಬಂದಿದೆ ನೀರು ಎಲ್ಲರಿಗೂ ಬೇಕು ನೀರಿನ ಭಾಷೆಯ ಭೂಮಿಯ ವಿಷಯ ಬಂದಾಗ ಪಕ್ಷಾತೀತವಾಗಿ ಜ್ಯಾತ್ಯಾತೀತವಾಗಿ ಒಗ್ಗಟ್ಟಿನಿಂದ ಕೇಳದಿದ್ದರೆ ಇಂದಿನ ಪರಸ್ಥಿತಿ ಮುಂದೆಯೂ ಅನುಭವಿಸಬೇಕಾಗುತ್ತದೆ 729 ಟಿಎಂಸಿ ನ್ಯಾಯಯುತವಾಗಿ ದೊರೆತ ನೀರಿನಲ್ಲಿ ತಮಿಳನಾಡಿಗೂ ಹೋಗುತ್ತದೆ ಎಂದರು. 55 ಟಿಎಂಸಿ ನೀರು ಜಿಲ್ಲೆಗೆ ಬೇಕು ಈ ಕುರಿತು ಸಮ್ಮೇಳನದಲ್ಲಿ ವಿಜಯಪೂರ ಜಿಲ್ಲೆಯು ಸಮಗ್ರ ನೀರಾವರಿ ಯಾಗಬೇಕು ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದಾರೆಂದರು.
ಕಾರ್ಯಕ್ರಮದ ಸಾನಿದ್ಯವಹಿಸಿದ ಕಪ್ಪತ್ತ ಗುಡ್ಡದ ಡಾ.ಶಿವಕುಮಾರ ಮಹಾಸ್ವಾಮಿಗಳು ಕನ್ನಡ ಸಾಹಿತ್ಯಗಳಲ್ಲಿಯ ಅನುಭಾವ ಸಾಹಿತ್ಯದ ಕುರಿತು ಭಹುಮಾಮರ್ಿಕವಾಗಿ ವಿವರಿಸಿದರು.
ವೇದಿಕೆಯ ಮೇಲೆ ಸಮ್ಮೇಳನಾಧ್ಯಕ್ಷ ಪ್ರೋ.ಬಿ.ಆರ್.ಪೊಲೀಸ್ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ, ಎಂ.ಬಿ.ನಾವದಗಿ, ಶ್ರೀಮತಿ ಸುಮಂಗಲಾ ಕೊಳೂರ, ಮಲ್ಲಿಕಾಜರ್ುನ ದೇವರಡ್ಡಿ, ಸಿದ್ದನಗೌಡ ಪಂಡಿತ, ಬಿ.ಆರ್.ಬನಸೂಡೆ, ಬಸವರಾಜ ಕುಂಬಾರ, ಸಿದ್ದಲಿಂಗ ಚೌದ್ರಿ, ವಾಸುದೇವ ಹೆಬಸೂರ, ಬ.ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಗುಳೇದ, ಬಸವರಾಜ ಅಳ್ಳಗಿ, ಡಿ.ವ್ಹಿ.ಪಾಟೀಲ, ಎಸ್.ಎನ್.ಡಿಸಲೆ, ಕಾಶಿನಾಥ ಸಜ್ಜನ, ವೆಂಕಣ್ಣ ತಾಳಪಲ್ಲೆ, ಡಾ.ಆರ್.ಎನ್.ಪಾಟೀಲ, ಕಾಶಿಮಪಟೇಲ ಮೂಕೀಹಾಳ, ಬಸವರಾಜ ಕುಂಭಾರ ಮೊದಲಾದವರು ಇದ್ದರು. ಅನೀಲ ಇರಾಜ ನಿರೂಪಿಸಿದರು.