ವಿದ್ಯುತ್ ಸಮಸ್ಯೆ ಸಲಹಾ ಸಮಿತಿಯ ಗಮನಕ್ಕೆ ತಂದಲ್ಲಿ ಶೀಘ್ರ ಪರಿಹರಿಸಿ
If an electricity problem is brought to the attention of the advisory committee, resolve it quickly
ಗ್ರಾಹಕ ಸಲಹಾ ಸಮಿತಿ ಸದಸ್ಯರ ಮೊದಲ ಸಭೆಯಲ್ಲಿ ಶಾಸಕ ಜೆ ಟಿ ಪಾಟೀಲ ಕರೆ
ಬೀಳಗಿ 19: ತಾಲೂಕಿನಲ್ಲಿ ಯಾವ ಸಂದರ್ಭದಲ್ಲಿ ಬೇಕಾದರು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇದ್ದಾಗ ರೈತರು ಜನರು ಅಧಿಕಾರಿಗಳ ಹಾಗೂ ಗ್ರಾಹಕರ ಸಲಹಾ ಸಮಿತಿಯ ಗಮನಕ್ಕೆ ತಂದರೆ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ ತಿಳಿಸಿದರು.
ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಹುಬ್ಬಳಿ ವಿದ್ಯುತ್ ಸರಬುರಾಜು ಕಂಪನಿ ನಿಯಮಿತದ ಕಾರ್ಯ ಮತ್ತು ಪಾಲನೆ ಉಪವಿಭಾಗ ಬೀಳಗಿ ವತಿಯಿಂದ ಶಾಸಕ ಜೆ ಟಿ ಪಾಟೀಲ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಗ್ರಾಹಕರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಲಹಾ ಸಮಿತಿ ಸದಸ್ಯರು ಜನರಿಗೆ ಸ್ಪಂದಿಸಿ ಜತೆಗೆ ಅಧಿಕಾರಿಗಳಿಗೆ ಪ್ರತಿ ಹಂತದಲ್ಲೂ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಬಗೆಹರಿಸಬೇಕು ಮತ್ತು ಅಧಿಕಾರಿಗಳು ಸದಸ್ಯರೊಂದಿಗೆ ಗೌರವಯುತವಾಗಿ ನಡೆದುಕೊಂಡು ಇರುವ ಸಮಸ್ಯೆಯನ್ನು ಬಗೆಹರಿಸಿ ಅಲ್ಲದೆ ಪ್ರತಿ ತಿಂಗಳು ಶಾಖಾ ಮತ್ತು ತಾಲೂಕಾ ಮಟ್ಟದ ಗ್ರಾಹಕ ಸಲಹಾ ಸಮಿತಿ ಸಭೆಗಾಗಿ ಒಂದು ದಿನಾಂಕ ನಿಗದಿ ಮಾಡಿ ಸಭೆ ಮಾಡಿ ಸಭೆಯ ಮಾಹಿತಿಯನ್ನು ನಮ್ಮ ಗಮನಕ್ಕೆ ತರಬೇಕು ಎಂದ ಅವರು ಟಿಸಿ ಬ್ಯಾಂಕು ಸೇರಿದಂತೆ ಹಲವಾರು ವ್ಯವಸ್ಥೆಯನ್ನು ಮಾಡಲಾಗಿದ್ದು, ತಾಲೂಕಿನಲ್ಲಿ ಬಾಗಿದ ವಿದ್ಯುತ್ತ ಕಂಬ, ಅಪಾಯಕಾರಿ ಸ್ಥಳ ಜನ ಸಂದಣಿಯಲ್ಲಿನ ವಿದ್ಯುತ್ತ ಕಂಬಗಳಿಗೆ ಪ್ಯಾಕಿಂಗ್ ತಂತಿಗಳನ್ನು ಹಾಕುವುದು, ಕಬ್ಬಿಣದ ಕಂಬಗಳ ತೆರವು ಆಗಬೇಕು ಮತ್ತು ತೆಗ್ಗಿ ಗುಳಬಾಳ ಜಾಕವೆಲ್ ಬಳಿಯಲ್ಲಿ ಯಾವುದೇ ಕ್ಷಣಕ್ಕೂ ವಿದ್ಯುತ್ತ ವ್ಯತ್ಯಯ ಆಗದಂತೆ ನಿಗಾವಹಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ತಗೆದುಕೊಳ್ಳಬೇಕು. ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗಿ ಸಮಸ್ಯೆಗಳ ಕುರಿತಾಗಿ ಚರ್ಚೆ ಮಾಡಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಂಜುನಾಥ ಬೋಕಿ ಮಾತನಾಡಿ ತಾಲೂಕಿನಲ್ಲಿ ಈಗಾಗಲೇ ಪರಿವರ್ತಕ ಬ್ಯಾಂಕು ಆರಂಭಿಸಿ ಕೇವಲ 24 ಗಂಟೆಯಲ್ಲಿಯೇ ರೈತರಿಗೆ ಪರಿವರ್ತಕ ಬದಲಾವಣೆ ಮಾಡುವ ಯೋಜನೆ ಜಾರಿಯಿದ್ದು ಟಿಸಿ ಬ್ಯಾಂಕಿನಲ್ಲಿ ಇನ್ನು 23 ಟಿಸಿಗಳು ಇದ್ದು ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ, ಬೀಳಗಿ ಪಟ್ಟಣದ ಎಲ್ಲ ವಿದ್ಯುತ್ತ ಕಂಬಗಳ ತಂತಿಗಳ ಬದಲಾವಣೆ ಮಾಡಿ ಪ್ಯಾಂಕಿಂಗ್ ತಂತಿ ಅಳವಡಿಕೆ ಮಾಡಲಾಗುವುದು ಮತ್ತು ಮನೆಗಳಿಗೆ ಹಾಗೂ ಜಮೀನುಗಳಲ್ಲಿ ಸೋಲಾರ್ ಅಳವಡಿಕೆಗೆ ಸಬ್ಸಿಡಿ ಯೋಜನೆ ಜಾರಿಯಲ್ಲಿದ್ದು ಜನರು ಅದರ ಅವಕಾಶ ಮಾಡಿಕೊಳ್ಳಬೇಕು ಮತ್ತು ತಾಲೂಕಿನಲ್ಲಿ 11 ವಿದ್ಯುತ್ತ ಉಪಕೇಂದ್ರಗಳಿದ್ದು, ಕುಡಿಯುವ ನೀರು, ಏತ ನೀರಾವರಿ, ನಿರಂತರ ಜ್ಯೋತಿ, ಕೈಗಾರಿಕೆ, ಕೃಷಿ ಪಂಪ್ ಸೆಟ್ ಮಾರ್ಗಗಳು ಸೇರಿದಂತೆ ಒಟ್ಟು 110 ಮಾರ್ಗಗಳಿದ್ದು ವಿದ್ಯುತ್ತ ಪೂರೈಕೆಯಲ್ಲಿ ಯಾವುದೆ ತೊಂದರೆಯಾಗದಂತೆ ನಿಗಾವಹಿಸಲಾಗುವುದು ಎಂದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್ ಡಿ ಛಾಫಿ, ಎಸ್‌ಓಗಳಾದ ಕಾಶಿನಾಥ ಜಾಲಿಕಟ್ಟಿ, ಓಂ ಪ್ರಕಾಶ ತಿಮ್ಮಶೆಟ್ಟಿ, ವಿ ಎಸ್ ಅಗಸಿಮುಂದಿನ, ಕೃಷ್ಣಾ ನಾಯಕ, ಮೇಲ್ವಿಚಾರಕರಾದ ಮಹಾಂತೇಶ ಹೊನ್ಯಾಳ, ಸದಸ್ಯರಾದ ಪಡಿಯಪ್ಪ ಕರಿಗಾರ, ಸಿದ್ದು ಮೇಟಿ, ಬಾನುಭಿ ಮಕಾಂದಾರ, ಶ್ರೀಶೈಲ ಜೊಗೆನ್ನವರ, ಭೀಮಪ್ಪ ಕುಂಬಾರ, ಪಾಂಡು ಮಮದಾಪೂರ, ಹಣಮಂತ ಜಲ್ಲೆ, ಸೋಮಪ್ಪ ಹಾದಿಮನಿ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 