ನವದೆಹಲಿ, ಮಾ.19, ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಫಿಟ್ ಆಗಿದ್ದು ಲಯದಲ್ಲಿದ್ದರೆ ಅವರನ್ನು ಕಡೆ ಗಣಿಸಲು ಸಾಧ್ಯವೇ ಇಲ್ಲ ಎಂದು ಮಾಜಿ ಆರಂಭಿಕ ಆಟಗಾರ ವಾಸೀಮ್ ಜಾಫರ್ ತಿಳಿಸಿದ್ದಾರೆ. ಇತ್ತೀಚಿಗೆ ಜಾಫರ್ ಎಲ್ಲ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ಧೋನಿ ತಂಡ ಸೇರುವುದರಿಂದ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂಥ್ ಅವರ ಮೇಲೆ ಒತ್ತಡ ಬೀಳಲಿದೆ ಎಂದಿದ್ದಾರೆ. “ಒಂದು ವೇಳೆ ಮಾಹಿ ಲಯದಲ್ಲಿದ್ದು, ದೈಹಿಕವಾಗಿ ಫಿಟ್ ಆಗಿದ್ದರೆ, ವಿಶ್ವಕಪ್ ತಂಡದಿಂದ ಅವರನ್ನು ಕೈ ಬಿಡುವ ಪ್ರಶ್ನೆ ಇಲ್ಲವೇ ಇಲ್ಲ. ಅವರು ವಿಕೆಟ್ ಹಿಂದೆ ತಂಡಕ್ಕೆ ಬಲ ತುಂಬ ಬಲ್ಲ ಆಟಗಾರ. ಧೋನಿ ತಂಡ ಸೇರಿದಾಗ, ಎಡಗೈ ಆಟಗಾರ ಎಂಬ ಕಾರಣದಿಂದ ಆಡಿಸುವುದಾದರೆ ಪಂತ್ ಅವರನ್ನು ಬ್ಯಾಟ್ಸ್ ಮನ್ ಆಗಿ ಆಡಿಸಬಹುದು” ಎಂದು ಜಾಫರ್ ತಿಳಿಸಿದ್ದಾರೆ.
ಮಹೇಂದ್ರ ಸಿಂಗ್ ಅವರು ಇಂಗ್ಲೆಂಡ್ ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಬ್ಲ್ಯೂ ಜೆರ್ಸಿ ತೊಟ್ಟಿಲ್ಲ. ಅಲ್ಲದೆ ಅವರು ಮುಂಬರುವ ಟಿ-20 ವಿಶ್ವಕಪ್ ನಲ್ಲಿ ಆಡಬೇಕಾ ಬೇಡವಾ ಎಂಬುದರ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿದ್ದು, ಈ ಎಲ್ಲ ಪ್ರಶ್ನೆಗಳಿಗೆ ಧೋನಿ ಬ್ಯಾಟ್ ಎಂಬ ಮಾಯಾ ದಂಡದ ಮೂಲಕವೇ ಉತ್ತರಿಸಬೇಕಿದೆ.