ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ: ಗಂಗಪ್ಪ

ಕೊಪ್ಪಳ 09: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಂಡು ವಾರಾಂತ್ಯ ಚಟುವಟಿಕೆಗಳ ಕಾರ್ಯಾಗಾರದಂತಹ ತರಬೇತಿಯಲ್ಲಿ ಭಾಗವಹಿಸಿವಂತೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಕರಾದ ಗಂಗಪ್ಪ ಅವರು ಹೇಳಿದರು. 

ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ (ಮಾ.07) ಹಿರೇಸಿಂದೋಗಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಾರಾಂತ್ಯ ಚಟುವಟಿಕೆಗಳ ಕಾಯರ್ಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

2019ರ ಸಷ್ಪೆಂಬರ್ 09ರಂದು  ಪ್ರಾರಂಭವಾಗಿ ಪ್ರತಿ ಶನಿವಾರ ಹಾಗೂ ಭಾನುವಾರ 50 ದಿನಗಳ ಕಾಲ ಶಾಲಾ ಅವಧಿಯ ನಂತರ ಕನಿಷ್ಠ 60 (5 ರಿಂದ 16 ವರ್ಷ) ಮಕ್ಕಳಿಗೆ ವಾರಾಂತ್ಯ ಚಟುವಟಿಕೆಗಳಾದ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲೆ, ಯೋಗ ಮತ್ತು ಕರಾಟೆ, ವಿಜ್ಞಾನ, ಸಾಹಿತ್ಯ, ಸಮೂಹ ನೃತ್ಯ ಮತ್ತು ಸಂಗೀತ, ರಂಗ ಚಟುವಟಿಕೆ ಇತ್ಯಾದಿಗಳ ಬಗ್ಗೆ ನುರಿತ ಅನುಭವಿ ಬಹುಮುಖ ಪ್ರತಿಭೆಯುಳ್ಳ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಬಾಲ ಭವನ ಸೊಸೈಟಿ ಬೆಂಗಳೂರು ರವರು ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗಿರುತ್ತದೆ. ಇನ್ನು ಹೆಚ್ಚಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ಕಾರ್ಯಕ್ರಮದಲ್ಲಿ ಹಿರೇಸಿಂದೋಗಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ದೇವೆಂದ್ರಪ್ಪ ಕುರಡಗಿ ರವರು ಅಧ್ಯಕ್ಷತೆ ವಹಿಸಿದ್ದರು.  ಹಿರೇಸಿಂದೋಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಂದಿಗಾಲಪ್ಪ ಸಿಂದೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಪಾಧ್ಯಕ್ಷ ಹೊಳೆಬಸಯ್ಯ ಕಾಟ್ರಹಳ್ಳಿ ಮಠ, ಶಿಕ್ಷಕರಾದ ನಾಗರಾಜ, ವೀರಯ್ಯ ವಂಟಿಗೋಡಿಮಠ, ಶಿಕ್ಷಕಿಯರಾದ ದೀಪಾ ರಾಘವೇಂದ್ರ ಅರಿಕೇರಿ ಸೇರಿದಂತೆ ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಪಾಲಕರುಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಬಾಲ ಭವನದ ಸಂಯೋಜಕರಾದ ಮೆಹಬೂಬ ಸಾಬ್ ಇಲಾಹಿ ಸರ್ವರನ್ನು ಸ್ವಾಗತಸಿದರು ಹಾಗೂ ರಾಘವೇಂದ್ರ ಅರಿಕೇರಿ ವಂದನಾರ್ಪಣೆ ನೆರವೇರಿಸಿದರು.