ಐಎಸ್ಎಲ್: ನಾರ್ತ್ ಈಸ್ಟ್-ಕೇರಳಾ ನಡುವೆ ಕಾದಾಟ

ಗುವಾಹಟಿ, ಫೆ.6 :   ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ 76ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಕೇರಳಾ ಬ್ಲಾಸ್ಟರ್ಸ್‍ ತಂಡಗಳು ಕಾದಾಟ ನಡೆಸಲಿವೆ.  

ಕೇರಳಾ ಬ್ಲಾಸ್ಟರ್ಸ್ ಆಡಿದ 15 ಪಂದ್ಯಗಳಲ್ಲಿ 3 ಜಯ, 5 ಡ್ರಾ, 7 ಸೋಲು ಕಂಡಿದ್ದು 14 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಇನ್ನು ನಾರ್ತ್ ಈಸ್ಟ್ ತಂಡದ 13 ಪಂದ್ಯಗಳಿಂದ 11 ಅಂಕ ಕಲೆ ಹಾಕಿದ್ದು, ಒಂಬತ್ತನೇ ಸ್ಥಾನದಲ್ಲಿದೆ.  

ಕೇರಳಾ ತಂಡದ ಪರ ಬಾರ್ತಲೋಮೆವ್ ಒಗ್ಬೆಚೆ 11, ಮೆಸ್ಸಿ ಬೌಲಿ 7 ಗೋಲು ಸಿಡಿಸಿದ್ದು ಭರವಸೆ ಮಾಡಿದ್ದಾರೆ. ಇನ್ನು ಗೋಲ್ ಕೀಪರ್ ಟಿಪಿ ರೆಹನೇಶ್ 23 ಗೋಲುಗಳನ್ನು ನೀಡದಂತೆ ತಡೆದು ಅಬ್ಬರಿಸಿದ್ದಾರೆ. ಜೆಸ್ಸೆಲ್ ಕಾರ್ನೆರೊ ಉತ್ತಮ ಪಾಸ್ ಗಳನ್ನು ನೀಡಿ ತಂಡಕ್ಕೆ ನೆರವಾಗಬಲ್ಲರು.   

ನಾರ್ತ್ ಈಸ್ಟ್ ತಂಡದ ಗೋಲಿ ಸುಭಾಶಿಶ್ ರಾಯ್ 46 ಗೋಲುಗಳನ್ನು ಎದುರಾಳಿಗಳಿಗೆ ನೀಡದಂತೆ ತಡೆಯುವಲ್ಲಿ ವಿಫಲರಾಗಿದ್ದಾರೆ. ಗೋಲು ಗಳಿಕೆಯ ವಿಚಾರದಲ್ಲಿ ಅಸಮೊಹ್ ಜ್ಞಾನ ತಂಡದ ಪರ ಮುಂಚೂಣಿಯಲ್ಲಿದ್ದಾರೆ. ರೇಗಾನ್ ಸಿಂಗ್ ಎದುರಾಳಿ ತಂಡದ ರಕ್ಷಣಾ ವಿಭಾಗವನ್ನು ವಂಚಿಸಬಲ್ಲ ಆಟಗಾರ.