ನವದೆಹಲಿ, ನ 19 : ಪ್ರತಿಷ್ಠಿತ ಪ್ರವಾಸಿ ರೈಲು, ಹಳಿಗಳ ಮೇಲೆ ಅರಮನೆ, ಸುವರ್ಣ ರಥ ಎಂದೆಲ್ಲಾ ಹೆಸರುವಾಸಿಯಾಗಿರುವ ಗೋಲ್ಡನ್ ಚಾರಿಯಟ್ ರೈಲು ಓಡಿಸಲು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ-ಐಆರ್ ಸಿಟಿಸಿ, ಮಂಗಳವಾರ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಜೊತೆ ಕೈಜೋಡಿಸಿದೆ.
ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ಉಪಸ್ಥಿತಿಯಲ್ಲಿ ಈ ಸಂಬಂಧ ಐ ಆರ್ ಸಿಟಿಸಿ ಹಾಗೂ ಕೆಎಸ್ ಟಿಡಿಸಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಒಡಂಬಡಿಕೆಗೆ ಮುನ್ನ ಮಾತನಾಡಿದ ರೈಲ್ವೆ ಸಚಿವ ಅಂಗಡಿ, ಗೋಲ್ಡನ್ ಚಾರಿಯಟ್ ರೈಲು ಹಾಗೂ ಇತರ ಐಷಾರಾಮಿ ರೈಲುಗಳ ಸೇವೆ ಜನಸಾಮಾನ್ಯರಿಗೆ ಎಟಕುವಂತಾಗಬೇಕು. ಸರ್ಕಾರ ಕೈಗೊಂಡಿರುವ ಕೈಗೊಂಡ ಈ ಕ್ರಮದಿಂದ ದಕ್ಷಿಣ ಭಾರತದಲ್ಲಿ ರೈಲು ಪ್ರವಾಸೋಧ್ಯಮ ವೃದ್ದಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಗಸ್ಟ್ 15ರ ಭಾಷಣದಲ್ಲಿ, ಭಾರತೀಯ ಪ್ರವಾಸಿಗಳು ಕನಿಷ್ಟ 15 ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಬೇಕು. ಗೋಲ್ಡನ್ ಚಾರಿಯಟ್ ರೈಲುಗಳು ಈನಿಟ್ಟಿನಲ್ಲಿ ದೊಡ್ಡ ನೆರವಾಗಲಿವೆ ಎಂದರು
ಜನರು ದೇಶದ ನೈಸರ್ಗಿಕ ಸೌಂದರ್ಯವನ್ನು ನೋಡಬೇಕು ಒಡಂಬಡಿಕೆಗೆ ಇಂದು ಸಹಿಹಾಕಿರುವ ಈ ಎರಡು ಸಂಘಟನೆಗಳನ್ನು ಅಭಿನಂದಿಸುತ್ತೇನೆ. ಕರ್ನಾಟಕ ಕುರಿತ ನಮ್ಮ ಮುನ್ನೋಟವನ್ನು ಅನಾವರಣಗೊಳಿಸಲು ನಾವು ಇಲ್ಲಿ ಸಭೆ ಸೇರಿದ್ದೇವೆ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.