2025 ರ ಐಪಿಎಲ್ ಹರಾಜಿನ ಪಟ್ಟಿಯು 367 ಭಾರತೀಯ ಕ್ರಿಕೆಟಿಗರು ಮತ್ತು 210 ಸಾಗರೋತ್ತರ ತಾರೆಯರನ್ನು ಒಳಗೊಂಡಿದೆ. ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಹಿಂದಿನ ತಂಡದಿಂದ ಕೆಲವು ಆಟಗಾರರನ್ನು ಉಳಿಸಿಕೊಂಡಿವೆ. ತಂಡವನ್ನು ಬಲಪಡಿಸಲು ಪರಿಣಾಮಕಾರಿ ರೀತಿಯಲ್ಲಿ ಬಳಸಲು ಪ್ರಯತ್ನಿಸುತ್ತಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ (IPL) 2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಖನೌ ತಂಡದ ಪಾಲಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತದ ಖರೀದಿಯಾಗಿದೆ.
ಶ್ರೇಯಸ್ ಅಯ್ಯರ್ ಸಹ ದಾಖಲೆಯ ಮೊತ್ತಕ್ಕೆ ಬೀಕರಿಯಾಗಿದ್ದು, 26.75 ಕೋಟಿ ರೂ. ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ತಂಡ ಖರೀದಿಸಿದೆ.
ಮೊದಲ ದಿನದದಲ್ಲಿ ಹಲವು ಸ್ಟಾರ್ ಆಟಗಾರರು ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಆದರೆ ಎರಡನೇ ದಿನದ ಹರಾಜು ಕೇನ್ ವಿಲಿಯಮ್ಸನ್ ಅವರೊಂದಿಗೆ ಆರಂಭವಾಗಿದ್ದು, ಯಾರೂ ಖರೀದಿ ಮಾಡಲು ಬಯಸಲಿಲ್ಲ.
ಈ ಹಿಂದೆ ಐಪಿಎಲ್ ನಲ್ಲಿ ಸದ್ದು ಮಾಡಿದ್ದ ಕೆಲವು ಆಟಗಾರರಿಗೆ ಇಂದು ಯಾವುದೇ ಬೇಡಿಕೆ ಬರಲಿಲ್ಲ. ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೇನ್ ವಿಲಿಯಮ್ಸನ್, ಶಾರ್ದೂಲ್ ಠಾಕೂರ್ ಮುಂತಾದವರು ಅನ್ ಸೋಲ್ಡ್ ಆದರು.