ಮುಂಬೈ, ನ.6: ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಹೆಸರುವಾಸಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 2020 ಆವೃತ್ತಿಯಲ್ಲಿ ಹೆಚ್ಚುವರಿ ಟಿವಿ ಅಂಪೈರ್ ನೋ ಬಾಲ್ ವೀಕ್ಷಿಸಲಿದ್ದಾರೆ. ಐಪಿಎಲ್ನ ಮುಂದಿನ ಆವೃತ್ತಿಯ ಪ್ರತಿ ಪಂದ್ಯದಲ್ಲೂ ನಾಲ್ಕು ಅಂಪೈರ್ಗಳನ್ನು ಹೊಂದಿರಲಿದೆ. ನಾಲ್ಕನೇ ಅಂಪೈರ್ನ ಕೆಲಸವೆಂದರೆ ನೋ ಬಾಲ್ ಮೇಲೆ ಕಣ್ಣಿಡುವುದಾಗುದೆ. ಐಪಿಎಲ್ ಕೊನೆಯ ಋತುವಿನಲ್ಲಿ, ಅಂಪೈರ್ಗಳ ತಪ್ಪುಗಳು ಹೆಚ್ಚು ಚರ್ಚಿಸಲಾಯಿತು ಮತ್ತು ನೋ ಬಾಲ್ ಬಗ್ಗೆ ಹಲವು ತಪ್ಪುಗಳು ಆಗಿದ್ದವು. ಈ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ಪಂದ್ಯದಲ್ಲೂ ನೋ ಬಾಲ್ ಬಗ್ಗೆ ನಿಗಾ ವಹಿಸಲು ಹೆಚ್ಚುವರಿ ಅಂಪೈರ್ ತರಲು ಸಿದ್ಧತೆ ನಡೆಸಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರು 2019 ರ ತುವಿನಲ್ಲಿ ನೋಬಾಲ್ ಬಗ್ಗೆ ಆಕ್ಷೇಪ ಎತ್ತಿದ್ದರು. ಅಲ್ಲದೆ ವಿರಾಟ್ ಈ ಬಗ್ಗೆ ಮಾತನಾಡುತ್ತಾ ಈ ಲೀಗ್ ಐಪಿಎಲ್ ಆಗಿದ್ದು, ಯಾವುದೇ ಕ್ಲಬ್ ಪಂದ್ಯಗಳಲ್ಲ ಎಂದಿದ್ದರು. ಧೋನಿ ಲೆಗ್ ಅಂಪೈರ್ ನೋಬಾಲ್ ನಿರ್ಧಾರವನ್ನು ಬದಲಿಸಿದ್ದರಿಂದ ಅವರೊಂದಿಗೆ ವಾದ ನಡೆಸಿದ್ದರು. ಭಾರತದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಪಿಎಲ್ 2020 ಕ್ಕಿಂತ ಮೊದಲು ದೇಶೀಯ ಪಂದ್ಯಾವಳಿಗಳಲ್ಲಿ ಈ ಪ್ರಯೋಗವನ್ನು ಪ್ರಯತ್ನಿಸಲಾಗುವುದು ಎಂದು ಕೌನ್ಸಿಲ್ ಸದಸ್ಯರೊಬ್ಬರು ಹೇಳಿದರು. ಯಾವುದೇ ಪಂದ್ಯಾವಳಿಯಲ್ಲಿ ಹೆಚ್ಚುವರಿ ಅಂಪೈರ್ಗಳನ್ನು ಬಳಸಬಹುದು. ಮುಷ್ತಾಕ್ ಅಲಿ ಟಿ 20 ಮತ್ತು ರಂಜಿ ಟ್ರೋಫಿಯಲ್ಲಿಯೂ ಸಹ ಇದನ್ನು ಮಾಡಬಹುದು. ಐಪಿಎಲ್ 2020 ರ ಆಟಗಾರರ ಹರಾಜು ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಹರಾಜು ಒಂದು ದಿನ ಇರುತ್ತದೆ. ಕೊನೆಯ ಬಾರಿಗೆ ಹರಾಜು ಜೈಪುರದಲ್ಲಿ ನಡೆದಿತ್ತು.