ಭಾರತ ಟಿ20 ವಿಶ್ವ ಕಪ್ ತಂಡದಲ್ಲಿ ಧೋನಿ ಇರುವುದನ್ನು ಬಯಸುತ್ತೇನೆ : ಶ್ರೀಕಾಂತ್

ನವದೆಹಲಿ, ಏ 19,ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ಅಭಿಮಾನಿಯಾಗಿರುವ ನಾನು, ಭಾರತ ಟಿ20  ವಿಶ್ವ ಕಪ್ ತಂಡದಲ್ಲಿ ಅವರು ಕಾಣಿಸಿಕೊಳ್ಳುವುದನ್ನು ಬಯಸುತೇನೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಅಭಿಪ್ರಾಯಟ್ಟಿದ್ದಾರೆ.ಇದೇ ವರ್ಷದ ಅಕ್ಟೋಬರ್ - ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವ ಕಪ್ ನಿಗದಿಯಾಗಿದೆ. ಮಾ.29 ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯ ಮೂಲಕ ಧೋನಿ ಸ್ಪರ್ಧಾತ್ಮಕತೆಗೆ ಮರಳುವ ಇರಾದೆಯಲ್ಲಿದ್ದರು. ಆದರೆ ಏಕಾಏಕಿ ಬಂದ ಕೊರೊನಾ ವೈರಸನ್ನು ತಡೆಗಟ್ಟುವ ಹಾಗೂ ಮುಂಜಾಗ್ರತ ಕ್ರಮವಾಗಿ ಟೂರ್ನಿಯನ್ನು  ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಒಂದು ವೇಳೆ ಈ ವರ್ಷ ಐಪಿಎಲ್ ನಡೆಯದಿದ್ದರೆ ಧೋನಿ ಪುನರ್ ಆಗಮನ ನಿರೀಕ್ಷಿಸುವುದು ಕಠಿಣ. ಏಕೆಂದರೆ ಕಳೆದ ಜುಲೈನಿಂದ ಧೋನಿ ಕ್ರಿಕೆಟ್ ನಿಂದ ದೂರವೇ ಉಳಿದಿದ್ದಾರೆ. ಧೋನಿ ಭವಿಷ್ಯ ಕುರಿತು ಪ್ರತಿಕ್ರಿಯಿಸಿರುವ ಶ್ರೀಕಾಂತ್,'' ಭಾರತೀಯ ಕ್ರಿಕೆಟ್ ಧೋನಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ನಿನ್ನೆಯ ಕೊನೆಯ ಎಸೆತವೂ  ಇತಿಹಾಸವೇ.ನೀವು ಮರುದಿನ ಮೊದಲಿನಿಂದ ಪ್ರಾರಂಭಿಸಬೇಕಿದೆ, ಒಂದು ವೇಳೆ ಅವರು ಟಿ20 ವಿಶ್ವ ಕಪ್ ಆಡಿದರೆ ಅವರ ಮೇಲೆ ಎಲ್ಲರ ಸೂಕ್ಷ್ಮದರ್ಶಕ ಇರುತ್ತದೆ. ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿರುವುದರಿಂದ ಯಾರಾದರೂ ತಮ್ಮ ಅಭಿಪ್ರಾಯ  ವ್ಯಕ್ತಪಡಿಸಬಹುದಾಗಿದೆ. ಧೋನಿ ಕುರಿತು ನಿರ್ಧರಿಸಲು ನಾನು ರಾಷ್ಟ್ರೀಯ ಆಯ್ಕೆಗಾರನಲ್ಲ. ನಾನು ಧೋನಿಯ ಅಭಿಮಾನಿ. ಹೀಗಾಗಿ ತಂಡದಲ್ಲಿ ಅವರನ್ನು ನೋಡಲು ಬಯುತ್ತೇನೆ. ಆದರೆ ಅದು ನನ್ನ ಕರೆಯಲ್ಲ,'' ಎಂದಿದ್ದಾರೆ.ಆದಾಗ್ಯೂ ಒಂದು ವೇಳೆ ಐಪಿಎಲ್ ನಡೆಯದಿದ್ದರೆ ಧೋನಿ ತಂಡಕ್ಕೆ ಮರಳುವುದು ತುಂಬ ಕಠಿಣ ಎಂದು ಶ್ರೀಕಾಂತ್ ಹೇಳಿದ್ದಾರೆ. ಏಕೆಂದರೆ ಅವರು ಸುಮಾರು ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರ ಉಳಿದಿರುವುದು ಅವರ ಪುನರ್ ಆಗಮನಕ್ಕೆ ಅಡ್ಡಿಯಾಗಿದೆ ಎಂದಿದ್ದಾರೆ. ಇದೇ ವೇಳೆ ವೈಟ್ ಬಾಲ್ ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಟಿ20 ತಂಡಕ್ಕೆ ಆಯ್ಕೆಯಾದರೆ ಧೋನಿಯನ್ನು ಹೊರಹಾಕುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.