ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಐ.ಸಿ.ಗೋಕುಲ

I.C. Gokula as a guest at the fair festival

ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಐ.ಸಿ.ಗೋಕುಲ 

ಧಾರವಾಡ 05:  ಜಾತ್ರೆಗಳು ಸಂಭ್ರಮದ ಜೊತೆಗೆ ಮನುಷ್ಯನಲ್ಲಿ ಸಂಸ್ಕಾರವನ್ನು ಬೆಳೆಸಲು ಪೂರಕವಾಗಬೇಕು ಎಂದು ಬಿಜೆಪಿ ಮುಖಂಡ ಐ.ಸಿ.ಗೋಕುಲ ಹೇಳಿದರು. ರವಿವಾರ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಆರಂಭವಾಗಿರುವ  ಗ್ರಾಮ ದೇವಿಯರ ಜಾತ್ರಾ ಮಹೋತ್ಸವದ ನಾಲ್ಕನೇ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪ್ರಸ್ತುತ ತಂತ್ರಜ್ಞಾನದ ಫಲದಿಂದ ಲಭಿಸಿರುವ ಟಿ.ವ್ಹಿ, ಮೊಬೈಲ್‌ಗಳಿಂದ ಸದುಪಯೋಗದ ಬದಲು ಯುವ ಸಮುದಾಯ ದಾರಿ ತಪ್ಪುವಂತಾಗಿದೆ. ಆದ್ದರಿಂದ ಜಾತ್ರೆಗಳಂತಹ ಕಾರ್ಯಕ್ರಗಳಿಂದ ಯುವಕರನ್ನು ಧಾರ್ಮಿಕತೆಯತ್ತ ಆಕರ್ಷಿಸುವ ಕೆಲಸವಾಗಬೇಕಿದೆ ಎಂದು ಗೋಕುಲ ಅಭಿಪ್ರಾಯಪಟ್ಟರು.  

ಸ್ಥಳೀಯ ವಿರಕ್ತಮಠದ ಪ.ಪೂಸಿದ್ಧಲಿಂಗ ಮಹಾಸ್ವಾಮಿಜಿ, ಬ್ಯಾಹೆಟ್ಟಿಯ ಶ್ರೀ ಮರುಳಿದ್ಧ ಶಿವಾಚಾರ್ಯರು, ಲಕ್ಕುಂಡಿ-ಹಳ್ಳಿಗೇರಿ ಅಲ್ಲಮಪ್ರಭುದೇವರ ಮಠದ  ಸಿದ್ಧಲಿಂಗ ಮಹಾಸ್ವಾಮೀಜಿ, ಮಾದನಬಾವಿಯ ಮಾತಾಜಿ ಶಿವದೇವಿ ಸಾನಿಧ್ಯವಹಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಬಸಪ್ಪ ಗಂಗಣ್ಣವರ ವಹಿಸಿದ್ದರು. 

ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಂಡಲ ಅಧ್ಯಕ್ಷರಾದ ಯಲ್ಲಾರಿ ಶಿಂಧೆ, ಯಲ್ಲಪ್ಪ ಹುಲೆಪ್ಪನವರ, ಗಣ್ಯರಾದ ವೈ.ಡಿ.ಸಣ್ಣಿಂಗಮ್ಮನವರ, ಕರೆಪ್ಪ ಅಮ್ಮಿನಭಾವಿ, ಶಿವಯ್ಯ ಹಿರೇಮಠ,ಅರ್ಜುನ ಪತ್ರೆಣ್ಣವರ, ಬಸವರಾಜ ಗುಂಡಗೋವಿ, ಡಾ.ಮಹೇಶ ತಿಪ್ಪಣ್ಣವರ, ವಿಠ್ಠಲ ಯಡಳ್ಳಿ, ಆನಂದಗೌಡ ಪಾಟೀಲ, ನಿಂಗಪ್ಪ ಹಡಪದ, ಸೋಮಶೇಖರ ಹೂಗಾರ ವೇದಿಕೆಯಲ್ಲಿದ್ದರು.