ನವದೆಹಲಿ, ಏ 4, ಕೊರೊನಾ ವೈರಾಣು ಸೋಂಕಿತರ ಚಿಕಿತ್ಸಾ ಕಾರ್ಯದಲ್ಲಿ ನಿರತರಾಗಿರುವ ಆರೋಗ್ಯ ಸೇವಾ ಸಿಬ್ಬಂದಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ 10 ಕೋಟಿ ಹೈಡ್ರಾಕಸಿಕ್ಲೋರೊಕ್ವೈನ್ ಮಾತ್ರೆಗಳಿಗೆ ವಿವಿಧ ಔಷಧ ಕಂಪೆನಿಗಳಿಗೆ ಬೇಡಿಕೆ ಇಟ್ಟಿದೆ.ಹೈಡ್ರಾಕಸಿಕ್ಲೋರೊಕ್ವೈನ್ ಮಾತ್ರೆಗಳನ್ನು ಕೇವಲ ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಕೊರೊನಾ ಶಂಕಿತರು ಅಥವಾ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ ಸಿಬ್ಬಂದಿಗೆ ಮಾತ್ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಶಿಫಾರಸ್ಸು ಮಾಡಿದೆ.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಿರುವ ಕೊರೊನಾ ಸೋಂಕಿತ ರೋಗಿಗಳಿಗೆ ಅಜಿತ್ರೋಮೈಸಿನ್ ಜೊತೆಗೆ ಹೈಡ್ರಾಕಸಿಕ್ಲೋರೊಕ್ವೈನ್ ಮಾತ್ರೆಗಳನ್ನು ನೀಡಲು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.