ಪ್ರಕೃತಿ ವಿಕೋಪಗಳಿಗೆ ಮಾನವನ ದುರಾಸೆ ಕಾರಣ

ಲೋಕದರ್ಶನ ವರದಿ

ಬಾಗಲಕೋಟೆ: ನಗರದ ಬೋವಿ ಗುರುಪೀಠದಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಕಂಡರಿಯದ ಜಲಪ್ರಳಯವಾಗಿದೆ. ಇದು ಹೃದಯ ಕಲಕುವಂಥದ್ದು. ಇಡೀ ಕನರ್ಾಟಕದ ಜನತೆ ಸ್ಪಂಧಿಸಿರುವುದು ಮಾನವೀಯತೆಯನ್ನು ತೋರುತ್ತದೆ. ನೆರೆ ಇಳಿದ ಮೇಲೆ ಹೆಚ್ಚು ಸಹಾಯದ ಅವಶ್ಯಕತೆ ಇದೆ. ಪ್ರಕೃತಿ ವಿಕೋಪಗಳಿಗೆ ಕಾರಣ ಮಾನವನ ದುರಾಸೆ. ಕಳೆದ ವರ್ಷ ಇಂಥದ್ದೇ ಪ್ರಕೃತಿ ವಿಕೋಪಕ್ಕೆತುತ್ತಾದ ಜನರ ಸಹಾಯಕ್ಕೆ 10ಲಕ್ಷ ನೀಡಿದ್ದೆವು. ಈ ಬಾರಿಯೂ ಮಠದಿಂದ ಐದು ಲಕ್ಷ ರೂಪಾಯಿ ನೀಡುತ್ತಿದ್ದೇವೆ.ಮತ್ತೆ ಕಲ್ಯಾಣದ ಕಾರ್ಯಕ್ರಮಗಳಲ್ಲೂ ನಿಧಿಸಂಗ್ರಹಿಸುತ್ತಿದ್ದೇವೆ. ಆ ಹಣವನ್ನೂ ಸೇರಿಸಿಕೊಡುವೆವು. 

     ರಾಜ್ಯಾದ್ಯಂತ ಇರುವ ಸಹಮತ ವೇದಿಕೆಯೂ ನೆರೆಸಂತ್ರಸ್ತರಿಗೆ ನೆರವು ನೀಡುತ್ತಿವೆ. ಭಕ್ತರ ಭಕ್ತಿಗೆ ಮಿತಿಯಿಲ್ಲ. ಗುರುಗಳಾದವರಿಗೆ ಎಲ್ಲತಾಯಂದಿರೂ ತಾಯಂದಿರು. ನಾವು ಅವರ ಮಕ್ಕಳಿದ್ದಂತೆ. 

 ಮಕ್ಕಳಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಜಾತಿಗೊಂದು ಮಠಗಳು ಬೇಕೇಎನ್ನುವ ಪ್ರಶ್ನೆಗೆ. ಅವರವರ ಸಮಾಜವನ್ನು ಸಂಘಟಿಸುವ ಕಾರ್ಯ ಅಗತ್ಯವಾಗಿರುವುದರಿಂದ ಇನ್ನುಎಷ್ಟು ಮಠಗಳಾದರೂ ಬರಲಿ. ಆದರೆ ಮತ್ತೆ ಅವು ಆ ಜಾತಿಗೆ ಮಾತ್ರ ಸೀಮಿತವಾಗಬಾರದು. ಸ್ವಾಮಿಗಳ ನಡುವೆ ಮತ್ತು ಭಕ್ತ ರನಡುವೆ ಸಾಮರಸ್ಯ ಮೂಡುವಂತಾಗಬೇಕು. ಮಠಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎಂದರು. ಸಾಂಕೇತಿಕವಾಗಿ ಸಂತ್ರಸ್ತರಿಗೆಗೆ ಅವಶ್ಯ ವಸ್ತುಗಳನ್ನು ನೀಡಿದರು. 

          ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿಯುವ ಸನ್ಯಾಸಿಗಳಿಗೆ ಪಂಡಿತಾರಾಧ್ಯಶ್ರೀಗಳು ಮಾರ್ಗದರ್ಶಕರು.ಮತ್ತೆ ಕಲ್ಯಾಣ ಅಷ್ಟೇ ಅಲ್ಲ; ಕ್ರಾಂತಿಯೂ ಹೌದು. ನುಣುಚಿಕೊಳ್ಳುವವರೇ ಹೆಚ್ಚು. ಆದರೆ ಪಂಡಿತಾರಾಧ್ಯ ಶ್ರೀಗಳು ನಿರಂತರವಾಗಿ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಇಂಥ ಎದೆಗಾರಿಕೆ ಎಲ್ಲರಿಗೂ ಸಾಧ್ಯವಿಲ್ಲ. ಗುರುಗಳ ಬದುಕೇ ಪಾರದರ್ಶಕವಾದುದು. 

      ಈ ಹಿನ್ನೆಲೆಯಲ್ಲಿ ಅವರ ಮಾತನ್ನು ಕನರ್ಾಟಕದ ಯಾವ ಸ್ವಾಮಿಗಳೂ ಮೀರಲಾರುರು. ಸ್ವಾಮಿಗಳಾದರೆ ಪಂಡಿತಾರಾಧ್ಯಶ್ರೀಗಳಂತೆ ಆಗಬೇಕು. ನಮ್ಮ ಮಠಕ್ಕೆ ಐತಿಹಾಸಿಕ ದಿನ. ಪೂಜ್ಯರು ನಮ್ಮಂಥ ಹಿಂದುಳಿದ ಮಠಕ್ಕೆ ಆಗಮಿಸಿ ನಮ್ಮ ಜೊತೆ ಪ್ರಸಾದ ಸ್ವೀಕರಿಸಸಿದ್ದು.