ಶಿಗ್ಗಾವಿ15 : ಮನುಷ್ಯನ ದೇಹ ಪೋಷಣೆಗೆ ಆಹಾರ ಎಷ್ಟು ಮುಖ್ಯವೋ ಮನುಷ್ಯನ ಕ್ರಿಯಾಶೀಲತೆ, ಆತ್ಮೋದ್ಧಾರಕ್ಕೆ ಸಾಹಿತ್ಯವೂ ಕೂಡಾ ಅಷ್ಟೆ ಮುಖ್ಯವಾಗಿದೆ ಎಂದು ಧಾರವಾಡ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಸಿ.ಹಿರೇಮಠ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದಲ್ಲಿ ನಡೆದ ಐ.ಕ್ಯೂ.ಎ.ಸಿ. ಮತ್ತು ಕನ್ನಡ ವಿಭಾಗ ಸಹಯೋಗದಲ್ಲಿ ನಡೆದ ಕನ್ನಡ ನುಡಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ನಮ್ಮ ಪಿತ್ರಾಜರ್ಿತ ಆಸ್ತಿಯಾಗಿದೆ. ಕನ್ನಡತಾಯಿಯ ಮಕ್ಕಳಾದ ನಾವು ಆ ಆಸ್ತಿಯ ಪಾಲುದಾರರಾಗಿ ಕನ್ನಡಭಾಷೆಯನ್ನು ಸಂರಕ್ಷಿಸುವ ಹೊಣೆಗಾರರಾಗಬೇಕು. ಬುದ್ಧಿಯ ವಿಕಾಶಕ್ಕೆ, ಹೃದಯ ಸಂಸಕಾರಕ್ಕೆ, ಸಾಹಿತ್ಯ ಅಮೃತ ನಿಧಿಯಾಗಿದ್ದು, ಮನುಷ್ಯನ ಐಹಿಕ ಮತ್ತು ಆಮುಸ್ಮಿಕ ಬದುಕಿಗೆ ಸಾಹಿತ್ಯ ಅವಶ್ಯವಾಗಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ.ಆನಂದ ಇಂದೂರ ಮಾತನಾಡಿ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಬರಬೇಕಿದೆ. ನೇಲ, ಜಲ, ಸಂರಕ್ಷಣೆಯ ಹೋಣೆ ನಮ್ಮ ನಿಮ್ಮೇಲ್ಲರದಾಗಬೇಕಿದೆ. ಕನರ್ಾಕಟದಲ್ಲಿ ಕನ್ನಡಿಗರೇ ಸಾರ್ವಬೌಮರಾಗಬೇಕು. ಕನ್ನಡಿಗರಿಗೆ ಉದ್ಯೋಗ ಅವಕಾಶದ ಪ್ರಾಶಸ್ತ್ಯ ಸಿಗುವಂತಾಗಬೇಕು ಅಂದಾಗ ಮಾತ್ರ ಕನ್ನಡಭಾಷೆ ಕನರ್ಾಟಕದಲ್ಲಿ ಭದ್ರವಾಗಿ ನೆಲೆಯೂರಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಪ್ರೋ. ಯಮುನಾ ಕೋಣೇಸರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಕನ್ನಡ ನುಡಿ ವೇದಿಕೆ ನಿಮ್ಮ ಪಠ್ಯತರ ಚಟುವಟಿಕೆಗೆ ಬದ್ರ ಬುನಾದಿಯಾಗಲಿದೆ. ಕನ್ನಡ ಭಾಷೆ ಬದುಕಿಗೆ ಹತ್ತಿರವಾಗಲಿದೆ. ಇಂದಿನ ಯುವಸಮೂಹ ದೇಶಾಭಿಮಾನ, ಭಾಷಾಭಿಮಾನವನ್ನು ಮೈಗೂಡಿಸಿಕೋಂಡು ನಡೆಯುವ ಅವಶ್ಯಕತೆಯಿದೆ ಎಂದು ಹೇಳಿದರು.
ಪ್ರೋ. ಡಿ.ಎಸ್.ಸೊಗಲದ, ಸಂತೋಷಕುಮಾರ ಕಟಕೆ, ಸುಜಾತಾ ಕಡ್ಲಿ, ಮಂಜುನಾಥ ನಾಯ್ಕ, ರಘುಪತಿ, ನಾಜ್ನಿನ, ಲುಬ್ನಾನಾಜ, ಮಂಜುಳಾ ಬಾದಾಮಿ, ಹುದಾಹುಸೇನ, ಚನ್ನಬಸವನಗೌಡ, ಉಮೇಶ ಕರ್ಜಗಿ, ವಿಜಯ ಗುಡಗೇರಿ ಪ್ರೋ. ಆಶಾ ಗುಡಿ ನಿರೂಪಿಸಿದರು. ಕು. ಸುಮಾದೇವಿ ಒಂದಿಸಿದರು.