ಬೆಂಗಳೂರು, ಡಿ.16 ಜಾಗತಿಕ
ವ್ಯಾಕ್ಯೂಮ್ ಕ್ಲೀನರ್ ಬ್ರ್ಯಾಂಡ್ ಆದ ಐರೋಬೋಟ್, ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ
ಘೋಷಿಸಿದೆ. ಅಷ್ಟೇ ಅಲ್ಲದೆ ರೂಂಬಾ ಐ7+ ವ್ಯಾಕ್ಯೂಮ್ ಕ್ಲೀನರ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಲಭ್ಯವಿದ್ದು
ಇದರ ಮೇಲೆ ಕೂಡ ರಿಯಾಯಿತಿ ಘೋಷಿಸಲಾಗಿದೆ. ಇನ್ಟ್ರುಡಿಕ್ಟರಿ ಆಫರ್ ಆಗಿ ಇದನ್ನು ಕೇವಲ 89,900 ರೂಪಾಯಿಗೆ
ಖರೀದಿಸಬಹುದು. ಇದರ ಮೂಲ ಬಲೆ ರೂ 99,900.ರೂಂಬಾ 966, 960, ಐ7 ಮತ್ತು ಐ7+ ಮಾದರಿಗಳನ್ನು ಖರೀದಿಸಿದರೆ
ಗ್ರಾಹಕರು ಅಮೆಜಾನ್ ಅಲೆಕ್ಸಾ ಇಕೋ ಡಾಟ್ ಉಚಿತವಾಗಿ ಪಡೆಯಬಹುದು. ರೂಂಬಾ ಇ5 ಮತ್ತು ಬ್ರಾವಾ 390ಟಿ
ವ್ಯಾಕ್ಯೂಮ್ ಕ್ಲೀನರ್ ಗೆ ಬಂಡಲ್ ಆಫರ್ ಘೋಷಿಸಲಾಗಿದೆ. ಈ ಆಫರ್ ಅನ್ವಯ ಈ ಎರಡು ಮಾದರಿಗಳನ್ನು ಕೇವಲ
59,900 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ ರೂ 78,800. ಈ ಎಲ್ಲಾ ಆಫರ್ ಗಳು ಐರೋಬೋಟ್ ಸ್ಟೋರ್ಸ್,
ಕ್ರೋಮಾ, ಅಮೆಜಾನ್ ಮತ್ತು ಐರೋಬೋಟ್ ವೆಬ್ಸೈಟ್ (irobot.in) ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.