ಹುಬ್ಬಳ್ಳಿ - ತಿರುಪತಿ ರೈಲು ಪುನರ್ ಆರಂಭ

Hubli - Tirupati train restarted

ಹೊಸಪೇಟೆ 17: ಮಹಾ ಕುಂಭಮೇಳದ ನಿಮಿತ್ಯ ಪ್ರಯಾಗ್‌ರಾಜ್‌ಗೆ ತೆರಳಿದ್ದ ಹುಬ್ಬಳ್ಳಿ - ತಿರುಪತಿ ಗಾಡಿ ಸಂಖ್ಯೆ : 57401/57402, ಮೂರು ತಿಂಗಳ ನಂತರ ದಿ.17.03.2025 ಪುನರ್ ಆರಂಭಗೊಂಡಿದೆ.  

ಈ ರೈಲು ಹಿಂದಿನ ವೇಳಾಪಟ್ಟಿಯಂತೆ ಹುಬ್ಬಳ್ಳಿಯಿಂದ ಬೆಳಿಗ್ಗೆ 6ಗಂಟೆಗೆ ನಿರ್ಗಮಿಸಿ ಗದಗ ಮಾರ್ಗವಾಗಿ ಹೊಸಪೇಟೆಗೆ ಬೆಳಿಗ್ಗೆ  9ಗಂಟೆಗೆ ಆಗಮಿಸುವುದು, ನಂತರ ಬಳ್ಳಾರಿ - ಕಡಪ ಮಾರ್ಗವಾಗಿ ರಾತ್ರಿ 10ಗಂಟೆಗೆ ತಿರುಪತಿಗೆ ತಲುಪುತ್ತದೆ. ಅದೇ ರೀತಿ ತಿರುಪತಿಯಿಂದ ಬೆಳಿಗ್ಗೆ  6ಗಂಟೆಗೆ ನಿರ್ಗಮಿಸಿ ಹೊಸಪೇಟೆಗೆ ಸಂಜೆ  5. 20ಕ್ಕೆ ಆಗಮಿಸಿ ಹುಬ್ಬಳ್ಳಿಯನ್ನು ರಾತ್ರಿ 9. 30ಕ್ಕೆ ತಲುಪುತ್ತದೆ. ಈ ರೈಲು ಪ್ಯಾಸೆಂಜರ್ ಆಗಿದ್ದು, ಟಿಕೆಟ್ ದರ ಹೀಗಿದೆ. ಹೊಸಪೇಟೆಯಿಂದ ಹುಬ್ಬಳ್ಳಿಗೆ ರೂ.35, ಬಳ್ಳಾರಿಗೆ ರೂ.20 (ಬಸ್ ದರ ರೂ.76), ಗುಂತಕಲ್‌ಗೆ ರೂ.35 ಹಾಗೂ ತಿರುಪತಿಗೆ ರೂ.85 ಆಗಿರುತ್ತದೆ. ಅತ್ಯಂತ ಕಡಿಮೆ ದರ ರಿಯಾಯಿತಿ ಸೌಲಭ್ಯವನ್ನು ಪ್ರಯಾಣಿಕರು ಸದ್ಬಳಕೆ ಮಾಡಿಕೊಳ್ಳಬೇಕು. 

ಅದೇ ರೀತಿ ಮಹಾ ಕುಂಭಮೇಳದ ನಿಮಿತ್ತ ರದ್ದಾಗಿರುವ ಎಕ್ಸ್‌ಪ್ರೆಸ್ ರೈಲು ಬೆಳಗಾವಿ - ಹೊಸಪೇಟೆ - ಹೈದ್ರಬಾದ್ - ಮಣಗೂರು ಗಾಡಿ ಸಂಖ್ಯೆ : 07335/07336 ಇನ್ನೂ ಆರಂಭವಾಗಿಲ್ಲ. ಆದುದರಿಂದ ಸದರಿ ರೈಲನ್ನು ಕೂಡಲೇ ಪುನರಾರಂಭಿಸಬೇಕು.  

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಇಲಾಖೆಗೆ ಅತ್ಯಧಿಕ ಆದಾಯವಿದೆ. ಆದುದರಿಂದ ಈ ಭಾಗದಲ್ಲಿ ಸಕಾಲದಲ್ಲಿ ನಿಗಧಿತ ವೇಳಾಪಟ್ಟಿಯಂತೆ ರೈಲುಗಳ ಸಂಚಾರ, ಹಾಗೂ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಲು ಕ್ರಮ ಕೈಗೊಳ್ಳಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಆಗ್ರಹಿಸಿದೆ.