ಸಿಲಿಂಡರ್ ಸೋರಿಕೆಯಿಂದ್ ಮನೆ ಸಾಮಗ್ರಿ ಸುಟ್ಟು ಭಸ್ಮ
ಮುಂಡಗೋಡ 28: ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಸಿಲಿಂಡರ್ ಸೋರಿಕೆಯಿಂದ ಮನೆಗೆ ಬೆಂಕಿ ತಗುಲಿ ಮನೆಯ ಮೇಲ್ಚಾವಣಿ ಸುಟ್ಟು ಮನೆಯಲ್ಲಿ ಇದ್ದ ಸಾಮಾಗ್ರಿಗಳು ಸುಟ್ಟು ಹಾನಿಯಾದ ಘಟನೆ ಅರಶಿಣಗೇರಿ ಗ್ರಾಮದಲ್ಲಿ ಶುಕ್ರವಾರ ಸಕ್ರಿವ್ವಾ ರವಿ ಲಮಾಣಿ ಎಂಬುವರ್ ಮನೆ ಸಿಲಿಂಡರ್ ಸೋರಿ ಅವಘಡ ಮಧ್ಯಾಹ್ನ ಸಂಭವಿಸಿದೆ.
ಮನೇಲಿ ಇದ್ದ ದವಸ ಧಾನ್ಯಗಳು ಹಾಗೂ ದಾಖಲಾತಿ ಪತ್ರಗಳು ನಗದು ರೂಪಾಯಿ ಮನೆಯಲ್ಲಿ ಇದ್ದ ಎಲ್ಲ ವಸ್ತುಗಳು ಸುಟ್ಟು ಬೂದಿಯಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಠಾಣೆಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಈ ಕಾರ್ಯಾಚಣೆಯಲ್ಲಿ ಪ್ರಭಾರ್ ಅಗ್ನಿ ಶಾಮಕ ಠಾಣಾಧಿಕಾರಿ ನಾಗರಾಜ್ ಮೂಲಿಮನಿ ಸಿಬಂದ್ದಿಗಳಾದ ಮಲ್ಲಿಕಾರ್ಜುನ್ ಮಲ್ಲಿಗವಾಡ್ ಅಡಿವೆಪ್ಪ ಕುರುವಿನಕೊಪ್ಪ್ ಹರೀಶ್ ಪಟಗಾರ ದುರಗಪ್ಪ ಹರಿಜನ ವೆಂಕಟಟಿಗ್ ರಾಹುಲ್ ಜಿಡ್ಡಿ ಮನಿ ಭಾಗವಹಿಸಿದ್ದರು.