ಮನೆಗೆ ಬೆಂಕಿ : ಅಪಾರ ಹಾನಿ
ಶಿರಹಟ್ಟಿ 23: ಪಟ್ಟಣದ 2 ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಹರಿಪುರದಲ್ಲಿರುವ ಶರಣಯ್ಯ ಹೊಸಮಠ ಎಂಬುವವರಿಗೆ ಸೇರಿದ ಮನೆಗೆ ಗುರುವಾರ ಬೆಳಿಗ್ಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಪರಿಕರಗಳು ಸುಟ್ಟು ಕರಕಲಾಗಿರುವ ಘಟನೆ ಜರುಗಿದೆ.
ಗುರುವಾರ ಬೆಳಿಗ್ಗೆ ಮನೆಯ ಮಾಲೀಕ ಶರಣಯ್ಯ ಹೊಸಮಠ ಅವರು ಕೆಲಸಕ್ಕೆ ಹೋದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಸದ್ಯಕ್ಕೆ ತಿಳಿದುಬಂದಿದೆ.