ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್, ರೆಸಾರ್ಟಗಳು ಬಂದ್
Hotels, resorts closed due to lack of commercial gas cylinders
ದಾಂಡೇಲಿ 25: ದಾಂಡೇಲಿಯಲ್ಲಿ ಮುಚ್ಚುತ್ತಿರುವ ಹೊಟೇಲಗಳನ್ನು ನೋಡಿದರೆ ಜಿಲ್ಲಾಡಳಿತದಿಂದ ಕಮರ್ಷಿಯಲ್ ಎಲ್.ಪಿ.ಜಿ ಸಿಲಿಂಡರ್ ಕೊರತೆಯಿಲ್ಲ ಎಂದು ವಿತರಕ ಕಂಪನಿಗಳಿಂದ ಸಭೆ ನಡೆಸಿ ಮಾಹಿತಿ ಪಡೆದು ಭರವಸೆ ನೀಡಲಾಗಿದ್ದರೂ, ನೆಲದ ಮಟ್ಟದಲ್ಲಿ ಚಿತ್ರಣ ಸಂಪೂರ್ಣ ವಿಭಿನ್ನವಾಗಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೆ ದಾಂಡೇಲಿಯಲ್ಲಿ ಹೋಟೆಲ್, ಹೊಂ ಸ್ಟೇ ಹಾಗೂ ರೆಸಾರ್ಟಗಳು ಒಂದರ ಹಿಂದೊಂದರಂತೆ ಬಾಗಿಲು ಮುಚ್ಚುತ್ತಿರುವದು ಆತಂಕಕ್ಕೆ ಕಾರಣವಾಗಿದೆ.
ದಾಂಡೇಲಿಯಂತಹ ಪ್ರವಾಸೋದ್ಯಮ ಆಧಾರಿತ ಪಟ್ಟಣಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಹೋಟೆಲ್ ಉದ್ಯಮ ಕುಸಿತದ ಅಂಚಿನಲ್ಲಿ ಗ್ಯಾಸ್ ಲಭ್ಯವಾಗದ ಕಾರಣ ಊಟದ ಸೇವೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ಕೆಲವೆಡೆ ಸಂಪೂರ್ಣವಾಗಿ ಬಾಗಿಲು ಮುಚ್ಚಲಾಗಿದೆ. ರೆಸಾರ್ಟಗಳಲ್ಲಿ ಪ್ರವಾಸಿಗರಿಗೆ ಆಹಾರ ವ್ಯವಸ್ಥೆ ಕಷ್ಟಕರವಾಗಿದ್ದರೆ, ಕೆಲವೆಡೆ ಕಟ್ಟಿಗೆ ಓಲೆಯಲ್ಲಿ ಅಡಿಗೆ ತಯಾರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ, ನೂರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಹೊಟೇಲ್ ಮುಚ್ಚುವಿಕೆಯ ಪರಿಣಾಮ ಅಡುಗೆ ಕಾರ್ಮಿಕರು, ಸರ್ವರ್‌ಗಳು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹಾಲು, ತರಕಾರಿ, ಮಾಂಸ ಪೂರೈಕೆದಾರರಿಗೆ ಬೇಡಿಕೆ ಕಡಿಮೆಯಾಗಿದೆ. ಪ್ರವಾಸೋದ್ಯಮ ಆಧಾರಿತ ಸ್ಥಳಿಯ ಆರ್ಥಿಕತೆ ಕುಸಿಯುತ್ತಿದೆ. ಒಟ್ಟಾರೆ ದಾಂಡೇಲಿಯಲ್ಲಿ ಕಮರ್ಷಿಯಲ್ ಎಲ್.ಪಿ.ಜಿ ಕೊರತೆಯಿಂದ ಹೋಟೆಲ್ ಹಾಗೂ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆಯಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 