ಲೋಕದರ್ಶನ ವರದಿ
ಹೊಸಪೇಟೆ 25: ರಾಷ್ಟ್ರೀಯ ಸೇವಾ ಯೋಜನೆಯು ಯುವಜನತೆಯಲ್ಲಿ ಉತ್ತಮ ನಾಯಕತ್ವದ ಗುಣವನ್ನು ಬೆಳೆಸುವಲ್ಲಿ ಹೆಚ್ಚು ಸಹಕಾರಿಯಾದುದು ಎಂದು ನಗರದ ಅಹನಾ ಕ್ರೆಡಿಟ್ ಕೋ-ಆಪರೇಟೀವ್ ಲಿಮಿಟೆಡ್ನ ಅಧ್ಯಕ್ಷ ಕೆ.ವೀರಭದ್ರ ಅಭಿಪ್ರಾಯಪಟ್ಟರು. ಸ್ಥಳೀಯ ಎಂ.ಪಿ.ಪ್ರಕಾಶ್ ನಗರದ ಏಳನೇ ವಾಡರ್್ನ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಶ್ವವಿದ್ಯಾಲಯ ಘಟಕದದಿಂದ ಆಯೋಜಿಸಿರುವ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರೆದು ಹಲವು ರಾಷ್ಟ್ರ ನಾಯಕರು ಈ ಎನ್.ಎಸ್.ಎಸ್.ನ ಮೂಲಕವೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆದಿದ್ದಾರೆ. ಇಂದಿನ ಯುವಜನತೆ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಸಮಾಜದಲ್ಲಿ ಬೇರೂರಿರುವ ಮೂಢ ನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವಲ್ಲಿ ಜನಜಾಗೃತಿಯನ್ನು ಮೂಡಿಸಲು ಇಂತಹ ವಿಶೇಷ ಶಿಬಿರಗಳು ನೆರವಾಗುತ್ತವೆ. ಈ ನಿಟ್ಟಿನಲ್ಲಿ ಯುವಕರು ಕೆಲಸಮಾಡಬೇಕು ಎಂದು ಕರೆನೀಡಿದರು.
ವಿಶೇಷ ಶಿಬಿರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ್ ಮಾತನಾಡಿ ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಶ್ರೇಷ್ಠ ಆದ್ದರಿಂದ ಯುವಕರು ಸೇವಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಎಂದು ಕಿವಮಾತು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶಮೂತರ್ಿ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್.ಎಸ್.ಎಸ್.ನ ಕಾರ್ಯಕ್ರಮಾಧಿಕಾರಿ ಕೆ.ಶಿವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ನಗರದ ವಕೀಲ ಮಹಮ್ಮದ್ ಆರ್.ಎನ್.ಬಡಿಗೇರ್,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಕೆ.ರಾಜೇಶ್ವರಿ ಉಪಸ್ಥಿತರಿದ್ದರು. ಸಹ ಶಿಬಿರಾಧಿಕಾರಿ ಡಿ.ಎಂ.ಮಲ್ಲಿಕಾಜರ್ುನಯ್ಯ ಹಾಗೂ ಬೆಸ್ತರ ಪುಂಡಲೀಕ ನಿರೂಪಿಸಿದರು. ವಿದ್ಯಾರ್ಥಿಗಳಾದ ನಿಂಗಪ್ಪ ಹಾಗೂ ಗಿರಿಜಾ ಸ್ವಾಗತಿಸಿದರು.