ಹೊಸಪೇಟೆ: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಯುವಜನತೆ ಹಕ್ಕು ಚಲಾಯಿಸಿ

ಲೋಕದರ್ಶನ ವರದಿ

ಹೊಸಪೇಟೆ 28: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಯುವಜನತೆ ಮತದಾನದ ಹಕ್ಕು ಚಲಾಯಿಸುವುದರ ಜತೆಗೆ ಇತರರಿಗೂ ಅರಿವು ಮೂಡಿಸಬೇಕು ಎಂದು ಪ್ರಭಾರ ಸಹಾಯಕ ಆಯುಕ್ತ ಪಿ.ಎನ್.ಲೋಕೇಶ ಹೇಳಿದರು. 

ಮತದಾರರ ಜಾಗೃತಿ ವೇದಿಕೆ ಮತ್ತು ಮತದಾರರ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ತಾಲೂಕು ಆಡಳಿತ ನಗರದ ಥಿಯೋಸಾಫಿಕಲ್ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಯುವ ಮತ್ತು ಭಾವಿ ಮತದಾರರ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಮೊದಲ ಚುನಾವಣೆಯಿಂದಲೇ ಸ್ತ್ರೀ-ಪುರುಷರಿಗೆ ಮತದಾನದ ಹಕ್ಕು ನೀಡಲಾಗಿದೆ. ಶೇಕಡವಾರು ಮತದಾನ ಕುಸಿಯದಂತೆ ಎಚ್ಚರವಹಿಸಬೇಕು ಎಂದರು. 

ಸಂಪನ್ಮೂಲ ವ್ಯಕ್ತಿ ಕೆ.ಬಸವರಾಜ, ಕಾಲೇಜ್ ಮಂಡಳಿ ಅಧ್ಯಕ್ಷ ಜಿ.ಭರಮನಲಿಂಗನ ಗೌಡ ಮಾತನಾಡಿದರು. ವಿದ್ಯಾಥರ್ಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಹಸೀಲ್ದಾರ್ ಎಚ್.ವಿಶ್ವನಾಥ, ಆಡಳಿತ ಮಂಡಳಿ ಸದಸ್ಯ ವಿ.ಶರಣಪ್ಪ, ಪ್ರಾಚಾಯರ್ೆ ಮಂಜುಳಾ, ಡಾ.ಚನ್ನಪ್ಪ, ಎ.ಕಾವೇರಿ ಇತರರಿದ್ದರು.