ಲೋಕದರ್ಶನ ವರದಿ
ಹೊಸಪೇಟೆ 13: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಮಲಾಪುರ ಕೆರೆ ಸಂರಕ್ಷಣೆ ಮತ್ತು ಕೆರೆಯನ್ನು ತುಂಬಿಸಬೇಕೆಂದು ಹಾಗೂ ಇನ್ನಿತರ ಹಕ್ಕೊತ್ತಾಯಗಳನ್ನು ಇಡೆರಿಸಬೇಕೆಂದು ಕಮಲಾಪುರದಿಂದ ಹೊಸಪೇಟೆ ರೋಟರಿ ವೃತ್ತದ ವರೆಗೆ ರೈತರ ಬೃಹತ್ ಪಾದಯಾತ್ರೆ ಮಾಡಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಬಳ್ಳಾರಿ ಸಂಸದರಾದ ದೇವೆಂದ್ರಪ್ಪರವರು ಬಂದರು ರೈತರ ಸಮಸ್ಯೆಗಳ ಬಗ್ಗೆ ಸಂಸದರಿಗೆ ಜಿಲ್ಲಾಧ್ಯಕ್ಷರಾದ ಕಾರ್ತಕ್ರವರು ಕೂಲಂಕುಶವಾಗಿ ವಿವರಿಸಿದರು.
ಕಮಲಾಪುರ ಕೆರೆಗೆ ನೀರು ತುಂಬಿಸಲು ಅಧಿಕಾರಿಗಳ ನಿರ್ಲಕ್ಷತನದಿಂದ ಇಂದು ಕೆರೆಯಲ್ಲಿ ನೀರಿಲ್ಲದಂತಾಗಿದೆ. ಹಾಗೂ ಇನ್ನು ಹಲವಾರು ವಿಚಾರಗಳ ಬಗ್ಗೆ ಸಂಸದರಿಗೆ ಪ್ರಸ್ತಾಪಿಸಿ ವಿವರಿಸಿದರು.
ಸಂಸದರು ಮಾತನಾಡಿ 15 ದಿನಗಳೊಳಗಾಗಿ ಕಮಲಾಪುರ ಕೆರೆಗೆ ನೀರನ್ನು ತುಂಬಿಸಲಾಗುತ್ತದೆ ಮತ್ತು ತುರ್ತ ಕಾಲುವೆ ತಡೆಗೋಡೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುತ್ತದೆ. ಅಧಿಕಾರಿಗಳು ಸರಿಯಾಗಿ ಕೆಲಸವನ್ನು ನಿರ್ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಹಾಗೂ ಸಂಸದರು ಮಾನ್ಯ ಮುಖ್ಯ ಮಂತ್ರಿಗಳಿಗೆ ಪೋನ್ ಮುಖಾಂತರ ಮಾತನಾಡಿದ್ದೇನೆ ಅದಕ್ಕೆ ರೈತರ ಸಮಸ್ಯೆಯನ್ನು ಬಗೆಹರಿಸಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸಂಸದರು ತಿಳಿಸಿದರು.
ಇನ್ನು ಹಲವಾರು ವಿಷಯಗಳ ಬಗ್ಗೆ ಮಾತನಾಡುವುದಿದ್ದು ಒಂದು ದಿನ ರೈತರೊಂದಿಗೆ ಪ್ರತ್ಯೇಕವಾಗಿ ಚಚರ್ೆ ಮಾಡೋಣ ಎಂದು ಸಂಸದರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ನಾರಾಯಣರೆಡ್ಡಿಯವರು ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ನೀರಾವರಿ ಇಲಾಖೆ, ಸಹಾಯಕ ಎಕ್ಸಿಕಿಟೀವ್ ಇಂಜಿನಿಯರ್ ಜೆಸ್ಕಾಂ, ಈ ಸಂದರ್ಭದಲ್ಲಿ ರೈತ ಮುಖಂಡರು ಭಾಗವಹಿಸಿದ್ದರು.
ಸಣ್ಣಕ್ಕಿ ರುದ್ರಪ್ಪ, ಹೆಚ್.ಜಿ.ಮಲ್ಲಿಕಾರ್ಜುನ, ಅಧ್ಯಕ್ಷರು ಕಮಲಾಪುರ. ಜೀರ್ ಸಂಗಪ್ಪ, ಉಪಾಧ್ಯಕ್ಷರು, ಬಿ.ವಿ.ಗೌಡ್ ಜಿಲ್ಲಾ ಕಾರ್ಯದಶರ್ಿ, ರೇವಣ ಸಿದ್ದಪ್ಪ, ಎಲ್.ನಾಗೇಶ್, ಸುರೇಶ್, ಎಲ್.ಎಸ್.ರುದ್ರಪ್ಪ, ಎ.ಮರಿಸ್ವಾಮಿ, ಹೇಮರೆಡ್ಡಿ, ಜೆ.ಮಲ್ಲಪ್ಪ.
ಕಮಲಾಪುರ. ಎಂ.ಜಿ.ಜೋಗಯ್ಯ, ಟಿ.ಡಿ.ಶ್ರೀನಿವಾಸ್, ಜೆ.ಬಸವರಾಜ್, ಜೆ.ನಾಗರಾಜ್, ನದೀಮ್ಬಾಷ್, ಕೃಷ್ಣಮೂರ್ತಿ, ಎ.ಸುರೇಶ್, ಎಂ.ರಮೇಶ್, ಲಕ್ಷ್ಮಣ, ಪ್ರಶಾಂತ್ಸಿಂಗ್, ಮಾಸಲು ಶ್ರೀನಿವಾಸ್, ಡಿ.ಯಂಕಪ್ಪ, ಇತರರು ಭಾಗವಹಿಸಿದ್ದರು.