ಸಿರುಗುಪ್ಪ ಸೌದಾಗರ್ ಮಸೀದಿಯಲ್ಲಿ ಶುಕ್ರವಾರ ನಮಾಜ್ ನಂತರ ಶಾಲು ಗುಲ್ ಪೂಶಿ ದೊಂದಿಗೆ ಗೌರವಿಸಿ ಸನ್ಮಾನ
ಸಿರುಗುಪ್ಪ 18: ಸೌದಾಗರ್ ಮಸೀದಿಯಲ್ಲಿ ಖಲೀಫಾ ಮೌಲಾನಾ ಅಬ್ದುಲ್ ಸಮದ್ ಅವರಿಗೆ ಗೌರವ ಸನ್ಮಾನಸಿರುಗುಪ್ಪ ನಗರದ ಸೌದಾಗರ್ ಜುಮ್ಮ ಸುನ್ನಿ ಮಸೀದಿಯ ಇಮಾಮೋ ಖತೀಬ್ ಕಾಮಿಲೆ ಹದೀಸ್ ಜಾಮೀಯ ನಿಜಾಮಿಯ ಹೈದರಾಬಾದ್ ಹಜರತ್ ಅಲ್ಲಾಮ ಮೌಲಾನ ಅಲ್ಹಾಜ್ ಎಸ್ ಅಬ್ದುಲ್ ಸಮದ್ ನಿಜಾಮಿ ಸಾಹೇಬ್ ಇವರಿಗೆ ಜನವರಿ 14ರಂದು ದಕ್ಷಿಣ ಭಾರತದ ಐತಿಹಾಸಿಕ ಪ್ರಸಿದ್ಧ ಪವಿತ್ರವಾದ ಗುಲ್ಬರ್ಗ ಮಹಾ ನಗರ ಕ್ಷೇತ್ರದ ಸಿಲ್ ಸಿಲೇ ಖಾದರಿಯ ಚಿಸ್ತಿಯಾ ನಕ್ಷ್ ಬಂದಿಯಾ ಖಾಜಾ ಬಂದಾ ನವಾಜಿಯ ಆಸ್ಥಾನದಲ್ಲಿ ಕಿಲಾಫತ್ ಸಮಾರಂಭದಲ್ಲಿ ಅವರಿಗೆ ಖಲೀಫ ಎಂಬ ಅವರ ಗೌರವಕ್ಕೆ ದೊರೆತಿರುವುದರಿಂದ ಜನವರಿ 17ರಂದು ಸಿರುಗುಪ್ಪ ಸೌದಾಗರ್ ಮಸೀದಿಯಲ್ಲಿ ಶುಕ್ರವಾರ ನಮಾಜ್ ನಂತರ ಶಾಲು ಗುಲ್ ಪೂಶಿ ದೊಂದಿಗೆ ಗೌರವಿಸಿ ಸನ್ಮಾನಿಸಿ ಪರಸ್ಪರ ವಿನಿಮಯ ಮಾಡಿ ಶುಭ ಹಾರೈಸಿದರು ಕರ್ನಾಟಕ ವಕ್ಫ್ ಬೋರ್ಡ್ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯ ಸಮಾಜ ಸುಧಾರಕರು ಹಾಜಿ ಅಬ್ದುಲ್ ನಬಿ ನಿಜಾಮಿ ನಗರ ಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಈದ್ಗಾ ಖಬರ್ ಸ್ಥಾನ ಕಮಿಟಿ ಮಾಜಿ ಅಧ್ಯಕ್ಷರಾದ ಹಂಡಿ ಹಾಶಿಮ್ ಸೌದಾಗರ್ ಮಸೀದಿ ಅಧ್ಯಕ್ಷ ಮಕಾಂದರ್ ಮಹಬೂಬ್ ಬಾಷಾ ಎ ಗೌಸೆರಬ್ಬಾನಿ ಹಂಡಿ ಹುಸೇನ್ ಸಾಬ್ ಡಾ ಮೊಹಮ್ಮದ್ ಅಲಿ ಮೌಜನ್ ಕೆ ಎಂ ಹೊನ್ನೂರ್ ವಲಿ ಹಾಜಿ ಟಿ.ಜಿ. ನಿಜಾಮುದ್ದೀನ್ ಮೊಹಮ್ಮದ್ ನೌಷಾದ್ ಅಲಿ ಟೈಲರ್ ಎನ್ ಕೆ ಮುನಾಫ್ ಖತೀಬ್ ಜೈರುದ್ದೀನ್ ಬಾಬು ಟೈಲರ್ ಸೆಂಡ್ರಿ ಷರೀಫ್ ನಿಜಾಮುದ್ದೀನ್ ಸಮುದಾಯದವರು ಉಪಸ್ಥಿತರಿದ್ದರು. ಸಿಹಿ ಪ್ರಸಾದ ವಿತರಿಸಲಾಯಿತುಸಿರುಗುಪ್ಪ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಜಾಗೃತಿ ಅಭಿಯಾನ ಕಾರ್ಯಕ್ರಮ ಕುಷ್ಟರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂಸಿರುಗುಪ್ಪ ಭಾರತ ಸರ್ಕಾರ ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ತಾಲೂಕ ಆಡಳಿತ ತಾಲೂಕ ಪಂಚಾಯತ್ ಸಿರುಗುಪ್ಪ ತಾಲೂಕ ಆರೋಗ್ಯ ಇಲಾಖೆ ಸಿರುಗುಪ್ಪ ಮತ್ತು ಎಲ್ಲಾ ಇಲಾಖೆಗಳ ಭಾಗಿತ್ವದಲ್ಲಿ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಅಭಿಯಾನ ಜಾಗೃತಿ ಕಾರ್ಯಕ್ರಮ ಯೋಜನೆ ಅಡಿ ಕುಷ್ಟರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಕುಷ್ಟರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಅವರು ಸರ್ವರಲ್ಲಿ ಮನವಿ ಮಾಡಿದರು ಸಿರುಗುಪ್ಪ ತಾಲೂಕು ತಹಸಿಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕುರಿತು ಅವರು ಮಾತನಾಡಿ ಕುಷ್ಟರೋಗ ಪ್ರಕರಣಗಳನ್ನು ಪತ್ತೆಹಚ್ಚಲು ತಂಡಗಳಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಇದ್ದು ಪ್ರತಿ ಮನೆ ಮನೆಯಲ್ಲಿ ಸಮೀಕ್ಷೆ ನಡೆಯುತ್ತಿದ್ದು ನಾಗರಿಕರು ಮತ್ತು ತಾವೆಲ್ಲರೂ ತಮ್ಮ ದೇಹದ ಮೇಲೆ ಕಂಡುಬರುವ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಆರೋಗ್ಯ ತಂಡಕ್ಕೆ ತೋರಿಸಿ ಸೂಕ್ತ ಕಾಲಕ್ಕೆ ಚಿಕಿತ್ಸೆ ಪಡೆದಲ್ಲಿ ಮುಂದೆ ಆಗಬಹುದಾದ ಅಂಗವಿಕಲತೆಯಿಂದ ಉಳಿಯಬಹುದು ಎಂದು ಮೊಹಮ್ಮದ್ ಖಾಶಿಂ ಅವರು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು ಗ್ರೇಡ್ - 2 ತಹಸಿಲ್ದಾರ್ ಕುಮಾರಿ ಸತ್ಯಮ್ಮ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ ಗಾದಿ ಲಿಂಗಪ್ಪ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಮಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಖಾದರ್ ಭಾಷಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಯೋಜನೆ ಅಧಿಕಾರಿ ಜಿ ಪ್ರದೀಪ್ ಕುಮಾರ್ ರಾಷ್ಟ್ರೀಯ ಸಾಕ್ಷರತಾ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಸಹಾಯಕ ಕೃಷಿ ನಿರ್ದೇಶಕರಾದ ಎಸ್ ಬಿ ಪಾಟೀಲ್ ತಾಲೂಕ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ ಸಿದ್ದಯ್ಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆ ಪದಾಧಿಕಾರಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.