ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಸನ್ಮಾನ
ಹುಬ್ಬಳ್ಳಿ 22 : ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯವತಿಯಿಂದ ಆಯೋಜಿಸಿದ್ದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಕೆಎಂಸಿಆರ್‌ಐ 24 ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತರಾದ ಸಕ್ಷಮ ಉತ್ತರ ಪ್ರಾಂತ್ಯದ ಅಧ್ಯಕ್ಷರು ಸ್ವತಃ ದೃಷ್ಟಿದೋಷ ಹೊಂದಿದ್ದರು ದಿವ್ಯಾಂಗರ ಏಳಿಗೆಗೆ ಶ್ರಮಿಸುತ್ತಿರುವ ಸಮಾಜ ಮುಖಿ ಚಿಂತನೆವುಳ್ಳ ಕ್ರೀಯಾಶೀಲ ವೈದ್ಯರಾದ ಡಾ. ಸುನೀಲ ಗೋಕಲೆೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಲು ಮಾಲಾರೆ್ಣ ಮಾಡಿ ಗ್ರಂಥಗಳನ್ನು ನೀಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ ನಿವೃತ್ ಜೀವನ ಸುಖಕರವಾಗಲೆಂದು ಶುಭ ಕೋರಿದರು. ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಪಾಲಿಕೆ ನಿವೃತ್ ಆರೋಗ್ಯ ಅಧಿಕಾರಿ ಡಾ.ವಿ.ಬಿ.ನಿಟಾಲಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಗ್ರಂಥ ಪಾಲಕ ಡಾ. ಸುರೇಶ ಡಿ. ಹೊರಕೇರಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ ಕೆಎಂಸಿಆರ್‌ಐ ಪ್ರಾಧ್ಯಾಪಕ ಡಾ. ಮಹೇಶ ಕುಮಾರ ಎಸ್. ವೈದ್ಯರಾದ ಡಾ. ಬಸವಕುಮಾರ ತಲವಾಯಿ ಹಿರಿಯರಾದ ಹಿರೇಮಠ ಮುಂತಾದವರು ಭಾಗವಹಿಸಿದ್ದರು.