ಹಾಂಕಾಂಗ್, ನ 15 : ಗೆಲುವಿನ ಲಯ ಮುಂದುವರಿಸಿರುವ ಭಾರತದ ಅಗ್ರ ಕ್ರಮಾಂಕದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರು ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ಸ್ ತಲುಪಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕಿಡಂಬಿ ಶ್ರೀಕಾಂತ್ ಮೊದಲನೇ ಸೆಟ್ನಲ್ಲಿ 21-13 ಅಂತರದಲ್ಲಿ ಚೀನಾದ ಚೆನ್ ಲಾಂಗ್ ವಿರುದ್ಧ ಜಯ ಸಾಧಿಸಿದ್ದರು. ಈ ವೇಳೆ ಚೀನಾ ಆಟಗಾರ ಗಾಯದಿಂದಾಗಿ ಪಂದ್ಯವನ್ನು ವಿಥ್ಡ್ರಾ ಮಾಡಿಕೊಂಡರು ಇದರ ಲಾಭ ಪಡೆದ ಕಿಡಂಬಿ ಅಂತಿಮ ನಾಲ್ಕರ ಘೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಕಿಡಂಬಿ ಶ್ರೀಕಾಂತ್ ಅವರಿಗೆ ಅದೃಷ್ಟ ಚೆನ್ನಾಗಿದೆ. ಟೂರ್ನಿಯ ಮೊದಲನೇ ಸುತ್ತಿನಲ್ಲೇ ವಿಶ್ವದ ಅಗ್ರ ಶ್ರೇಯಾಂಕಿತ ಕೆಂಟೊ ಮೊಮೊಟಾ ಅವರ ವಿರುದ್ಧ ಸೆಣಸಬೇಕಾಗಿತ್ತು. ಆದರೆ, ಅವರು ಅನಿರೀಕ್ಷಿತವಾಗಿ ಹಾಂಕಾಂಗ್ ವಿಥ್ಡ್ರಾ ಮಾಡಿಕೊಂಡಿದ್ದರು. ಇದರ ಲಾಭ ಪಡೆದ ಶ್ರೀಕಾಂತ್ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದರು.
ನಿನ್ನೆಯೆಷ್ಟೆ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ಎರಡನೇ ಸುತ್ತಿನಲ್ಲಿ ಥಾಯ್ಲೆಂಡ್ ನ ಬುಸನಾನ್ ವಿರುದ್ಧ 21-18, 11-21, 21-16 ಅಂತರದಲ್ಲಿ ಸೋಲು ಅನುಭವಿಸಿದ್ದರು. ಪರುಪಳ್ಳಿ ಕಶ್ಯಪ್ ಅವರು ಚೈನೀಸ್ ತೈಫೆಯ ಚೌ ಟೀನ್-ಚೆನ್ ಅವರ ವಿರುದ್ಧ ಸೋಲು ಅನುಭವಿಸಿದ್ದರು.