ಹಾಂಕ್ ಕಾಂಗ್ ಭದ್ರತಾ ಕಾಯ್ದೆ; ಚೈನಾ ರಾಯಬಾರಿಗೆ ಬ್ರಿಟನ್ ಸಮೆನ್ಸ್


ಲಂಡನ್, ಜುಲೈ 2:  ಹಾಂಕ್ ಕಾಂಗ್ ನಲ್ಲಿ  ಜಾರಗೊಳಿಸಿರುವ   ಭದ್ರತಾ ಕಾಯ್ದೆ ಸಂಬಂಧ  ಬ್ರಿಟನ್    ವಿದೇಶಾಂಗ  ಸಚಿವಾಲಯ  ಚೈನಾ  ರಾಯಬಾರಿ ಲಿಯು ಕ್ಸಿಯಾವೋ ಮಿಂಗ್  ಅವರನ್ನು   ತನ್ನ ಕಚೇರಿಗೆ  ಬರುವಂತೆ ಸಮೆನ್ಸ್  ನೀಡಿದೆ ಎಂದು  ಸ್ಕೈ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

ಹಾಂಕ್ ಕಾಂಗ್ ನಲ್ಲಿ   ಜಾರಿಗೊಳಿಸಿರುವ  ರಾಷ್ಟ್ರೀಯ ಭದ್ರತೆ  ಸಂರಕ್ಷಣಾ  ಕಾಯ್ದೆ   ಈ ಪ್ರದೇಶ  ಸ್ವಾಯತ್ತತೆ ಕಲ್ಪಿಸುವ ಸಂಬಂಧ   ಬ್ರಿಟನ್ ಹಾಗೂ  ಚೈನಾ  ನಡುವಣ   ಒಪ್ಪಂದವನ್ನು  ಉಲ್ಲಂಘಿಸುತ್ತದೆ ಎಂದು  ಬ್ರಿಟನ್   ಪ್ರಧಾನ ಮಂತ್ರಿ  ಬೋರಿಸ್  ಜಾನ್ಸನ್  ಇದಕ್ಕೂ ಮುನ್ನ   ಆಕ್ಷೇಪ ವ್ಯಕ್ತಪಡಿಸಿದ್ದರು.

ಹಾಂಕ್ ಕಾಂಗ್  ಭದ್ರತಾ ಕಾಯ್ದೆ  ಕುರಿತಂತೆ   ಬ್ರಿಟನ್  ಉಪ ವಿದೇಶಾಂಗ ಸಚಿವ  ಸೈಮನ್  ಮ್ಯಾಕ್ ಡೊನಾಲ್ಡ್  ಅವರನ್ನು  ಬುಧವಾರ  ಭೇಟಿ ಮಾಡುವುಂತೆ  ಬ್ರಿಟನ್ ವಿದೇಶಾಂಗ ಸಚಿವಾಲಯ  ಚೈನಾ ರಾಯಬಾರಿಗೆ  ಸಮೆನ್ಸ್  ನೀಡಿದೆ    ಎಂದು  ಸ್ಕೈ ಸುದ್ದಿ ವಾಹಿನಿ  ವರದಿ ಮಾಡಿದೆ.