ಮುಂದಿನ ಯುವ ಪೀಳಿಗೆಗೆ ಜೇನು ಕೃಷಿ ಒಂದು ಉದ್ಯಮವಾಗಲಿದೆ: ತೋಟಗಾರಿಕೆ ಜಂಟಿ ನಿರ್ದೇಶಕ ದಿಡ್ಡಿಮನಿ

ಕೊಪ್ಪಳ: ಮುಂದಿನ ಯುವ ಪೀಳಿಗೆಗೆ ಜೇನು ಕೃಷಿ ಒಂದು ಉದ್ಯಮವಾಗಲಿದೆ ಎಂದು ಕಲಬುರಗಿ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಎಸ್.ಬಿ.ದಿಡ್ಡಿಮನಿ ರೈತರಿಗೆ ಹೇಳಿದರು.

"ಜೇನು ಮೇಳ" ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ನಿಮಿತ್ತ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಬುಧವಾರದಂದು (ಅ.23) ಆಯೋಜಿಸಲಾಗಿದ್ದ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರವನ್ನು   ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಜೇನು ಸೇವಿಸುತ್ತಾರೆ. ಆದರೆ ಜೇನು ಕೃಷಿಯ ಬಗ್ಗೆ ಹೆಚ್ಚು ಜನ ಗಮನ ಹರಿಸುವುದಿಲ್ಲ. ಹೊಸ ಹೊಸ ಜೇನು ಕೃಷಿ ಉತ್ಪಾದನೆಗೆ ತೋಟಗಾರಿಕೆ ಇಲಾಖೆ ಬಹಳ ಪ್ರೋತ್ಸಾಹವನ್ನು ನೀಡುತ್ತಿದೆ. ಪ್ರಸ್ತುತ ಐದು ಸಾವಿರ ಟನ್ನಷ್ಟು ಜೇನಿಗೆ ಬೇಡಿಕೆ ಇದೆ. ಮುಂದಿನ ದಿನಮಾನಗಳಲ್ಲಿ ಅದರ ಬೇಡಿಕೆ ಹೆಚ್ಚಾಗುತ್ತದೆ. ಇಂದು ಒಂದು ಕೆ.ಜಿ. ಗೆ ರೂ. 500 ದರದಲ್ಲಿ ಮಾರಾಟವಾಗುತ್ತಿದ್ದು, ಮುಂದೊಂದು ದಿನ ಉದ್ಯಮವಾಗುವಲ್ಲಿ ಯಾವುದೇ ಸಂಶಯವಿಲ್ಲ. ಕೃಷಿ ರೈತರು ಸಂಗ್ರಹಿಸಿದ ಜೇನು ತುಪ್ಪ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ನೈಸಗರ್ಿಕವಾಗಿ ಬೆಳೆದ ಜೇನು ಆಯುವರ್ೇದ ಹಾಗೂ ಮೌಲ್ಯವರ್ಧಕವಾಗಿರುತ್ತದೆ. ಆಹಾರ ಕೊರತೆ ಇರುವುದರಿಂದ ಉತ್ಪಾದಕತೆಗೆ ಹೆಚ್ಚು ಗಮನ ಕೊಡಬೇಕು. ಪೋಷಕಾಂಶ ಪೂರಿತ ಆಹಾರ ಪದ್ಧತಿಗಳನ್ನು ರೂಢಿಸಿಕೊಂಡು, ಅವುಗಳನ್ನು ಸೇವಿಸುವುದು ನಮ್ಮ ಕರ್ತವ್ಯವಾಗಬೇಕು. ಜೇನು ಕೃಷಿಯಲ್ಲಿರುವ ಕೀಟ ವರ್ಧಕಗಳನ್ನು ಬಳಕೆ ಮಾಡಿಕೊಂಡು ಮೌಲ್ಯವರ್ಧಕ ಜೇನು ಯುವ ಕೃಷಿಕರಿಗೆ ವಿಶೇಷವಾಗಿ ರೈತರಿಗೆ ಆದಾಯದಾಯಕವಾಗಿರುತ್ತದೆ ಎಂದು ಹೇಳಿದರು.

ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಪ್ರಾಸ್ತಾವಿಕವಾಗಿ  ಮಾತನಾಡಿ, ಹಿಂದಿನ ವರ್ಷದಲ್ಲಿ 2 ಟನ್ ಜೇನು ತುಪ್ಪವನ್ನು ಮಾರಾಟ ಮಾಡಲಾಗಿತ್ತು. ಕೇವಲ ಜೇನಿನ ಬಗ್ಗೆ ಅಷ್ಟೇ ಮಧು ಮೇಳವನ್ನು ಏರ್ಪಡಿಸಿದ್ದೆವು, ಆದರೆ ಈ ವರ್ಷ ಜೇನು ಮೇಳದಲ್ಲಿ  ಕೃಷಿಕರು ಬಹಳ ಉತ್ಸಾಹದಿಂದ ಕಾಯರ್ಾಗಾರದಲ್ಲಿ ಭಾಗಿಯಾಗಿದ್ದಾರೆ. ಪ್ರತಿಯೊಂದು ಇಲಾಖೆ ಯಿಂದ ಜೇನು ಕೃಷಿಗೆ ಶೇ.  75 ರಷ್ಟು ಉಪಯೋಗವಾಗುತ್ತದೆ. ಜೇನು ಕೃಷಿ ಮಾಡುವ ರೈತರಿಗೆ ಸಹಾಯ ಧನ ನೀಡಿ, ತರಬೇತಿಯನ್ನೂ  ಕೊಡುತ್ತಾರೆ ಎಂದು ರೈತರಿಗೆ ತಿಳಿಸಿದರು.

ಕಾಯರ್ಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಹಾಗೂ ಕೊಪ್ಪಳ ತಾಲ್ಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಹೆಚ್.ವಿ. ವಿರುಪಾಕ್ಷಪ್ಪ  ಅವರು ಮಾತನಾಡಿ, ನಾವು ಉಳಿಯಬೇಕೆಂದರೆ ಜೇನು ಉಳಿಯಬೇಕು. ಪರಿಸರ ಎಲ್ಲಿ ಹಾಳಾಗುತ್ತದೆಯೋ ಅಲ್ಲಿ ಜೇನು ಕೃಷಿ ಹಾಳಾಗುತ್ತದೆ. ಉದ್ಯಮಿಗಳು, ಸಾರ್ವಜನಿಕರು ಜೇನು ಕೃಷಿಯನ್ನು ಬೆಳೆಸಬೇಕು. ಅಂದಾಗ ಮಾತ್ರ ಯುವ ಪೀಳಿಗೆಗೆ ಜೇನು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. ಜೇನು ಉತ್ಪಾದನೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಗಮನವನ್ನು ಹರಿಸುತ್ತಾರೆ. ನಮ್ಮ ಹಿರಿಯರ ಪರಂಪರೆಯಿಂದ ಬಂದ ಹೊಲವನ್ನು ಇಂದು ವಿದ್ಯಾವಂತರಾದ ಮಕ್ಕಳು ಮರೆತಿದ್ದಾರೆ. ವಿದ್ಯಾವಂತರಾದರೂ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ನಾಡಗೀತೆ ಮತ್ತು ರೈತ ಗೀತೆಯನ್ನು ಹಾಡುವುದರ ಮುಖಾಂತರ ಕಾಯರ್ಾಗಾರವನ್ನು ಪ್ರಾರಂಭ ಮಾಡಲಾಯಿತು. ಇನ್ನೂ ಎರಡು ದಿನಗಳ ಕಾಲ ಜೇನು ಮೇಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ಕಾರ್ಯಾಗಾರದಲ್ಲಿ ಜೇನು ಕೃಷಿಕರಾದ ಬಳ್ಳಾರಿ ಆರ್. ಅರವಿಂದ, ಭೀಮರಾವ್ ದೇಶಪಾಂಡೆ, ಮುನಿರಾಬಾದ್ನ ಸಾವಯವ ಕೃಷಿಕ ಡಾ. ಪ್ರಕಾಶ, ಕೊಪ್ಪಳ ಕೀಟ ಶಾಸ್ತ್ರಜ್ಞ ಡಾ. ಪಿ.ಆರ್. ಬದರಿಪ್ರಸಾದ್, ತೋಟಗಾರಿಕ ಇಲಾಖೆ ಉಪನಿರ್ದೇಶಕ ವಾಮನ ಮೂರ್ತಿ, ತಮಿಳುನಾಡಿನ ಡಾ. ಜೋಸೆಫ್ ಹಾಗೂ ನಾಲ್ಕು ತಾಲ್ಲೂಕಿನ ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.