ಹೊನಮಟ್ಟಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

ಹೊನಮಟ್ಟಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ Honamatti State Level Teacher Ratna Award presented

ಹೊನಮಟ್ಟಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ 

ದೇವರಹಿಪ್ಪರಗಿ 14: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ  ಕಾರ್ಯಕ್ರಮದಲ್ಲಿ ಕೊರವಾರದ ಡಾ.ಬಸವರಾಜ ಹೊನಮಟ್ಟಿ ಅವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 

ಸಿರಿಗನ್ನಡ ವೇದಿಕೆ, ಜಿಲ್ಲಾ ಘಟಕ ಕಲಬುರ್ಗಿ ಹಾಗೂ ಸಾಕ್ಷಿ ಪ್ರತಿಷ್ಠಾನ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಜ್ಯ ಮಟ್ಟದ ಡಾ. ಎಸ್‌. ರಾಧಾಕೃಷ್ಣನ್ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಮಾರು 18 ವರ್ಷಗಳ ಕಾಲ ನಾಡು, ನುಡಿ,ಜಲ, ಸಂಸ್ಕೃತಿಯ ಕುರಿತು ಅನುಭವ ಇರುವ ಇವರು ಗಾದೆ ಮಾತುಗಳ ಸಂಸ್ಕೃತಿಕ ಅಧ್ಯಯನ ವಿಷಯದ ಕುರಿತು ಸಂಶೋಧನೆ ಮಾಡಿದ್ದಾರೆ, ಎರಡು ಪುಸ್ತಕಗಳನ್ನು ಪ್ರಕಟ ಮಾಡುವ ಮೂಲಕ ಹಲವು ಲೇಖನ, ಗಾದೆ, ಒಗಟು, ಹಂತಿ ಪದಗಳ ಸಂಗ್ರಹ ಪ್ರಸಕ್ತ ದೇವರ ಹಿಪ್ಪರಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವುದು, ಇವರ ಸೇವೆ ಪರಿಗಣಿಸಿ ರವಿವಾರದಂದು ಕಲಬುರ್ಗಿ ಪಟ್ಟಣದ ರಂಗಾಯಣದಲ್ಲಿ ನಾಡಿನ ಸಾಹಿತಿಗಳು ರಾಜಕೀಯ ಮುಖಂಡರು ಗಣ್ಯರು ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.