ಬೆಂಗಳೂರು, ಮಾ.30- ಮನೆ ಬಾಡಿಗೆದಾರರಿಗೆ ಮಾಲೀಕರು ತೊಂದರೆ ಕೊಡಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ.ಅದೇ
ರೀತಿ ಪಿಜಿ, ಬಾಡಿಗೆ ಮನೆಯಲ್ಲಿರುವವರಿಗೆ ತೊಂದರೆ ಕೊಡಬಾರದು. ವೈದ್ಯರು, ನರ್ಸ್ಗಳು
ಸೇರಿದಂತೆ ಯಾರನ್ನು ಮನೆ ಖಾಲಿ ಮಾಡುವಂತೆ ಒತ್ತಡ ಹೇರಬಾರದು. ಒಂದು ವೇಳೆ ಯಾರಾದರೂ
ತೊಂದರೇ ನೀಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ
ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಡಿಗೆದಾರರು ಮತ್ತು ಪಿಜಿಯಲ್ಲಿ
ಇರುವವರನ್ನು ಖಾಲಿ ಮಾಡಿಸಬಾರದು. ಬಾಡಿಗೆದಾರರಿಗೆ ತೊಂದರೆ ಕೊಟ್ಟವರ ವಿರುದ್ಧ ಕೇಸ್
ದಾಖಲಿಸಲಾಗುವುದು ಎಂದರು.ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಮಾಡಿದ
ಹಿನ್ನೆಲೆಯಲ್ಲಿ ಇನ್ನು ಮುಂದೆ ವಾಹನದಲ್ಲಿ ತೆರಳಿ ಅಂಗಡಿಗೆ ಹೋಗುವಂತಿಲ್ಲ.
ಸಾರ್ವಜನಿಕರು ದಿನಸಿ ವಸ್ತುಗಳನ್ನು ಖರೀದಿಸಲು ನಡೆದುಕೊಂಡೇ ಓಡಾಡಬೇಕೆ ಹೊರತು ಯಾವುದೇ
ವಾಹನ ಬಳಸುವಂತಿಲ್ಲ. ಅಲ್ಲದೇ, ತಮ್ಮ ಏರಿಯಾದ ರಸ್ತೆಯಲ್ಲಿ ದಿನಸಿ ವಸ್ತುಗಳನ್ನು
ಖರೀದಿ ಮಾಡಬೇಕು ಎಂದು ಅವರು ತಿಳಿದ್ದಾರೆ.
ವಲಸೆ ಕಾರ್ಮಿಕರಿಗೆ ಹೊರ ಹೋಗದಂತೆ
ಕ್ರಮ ಜರುಗಿಸಬೇಕು ಎಂದ ಅವರು ಬೆಂಗಳೂರಿನ ಕಲ್ಯಾಣ ಮಂಟಪದಲ್ಲಿ ಅವರಿಗೆ ಊಟದ
ವ್ಯವಸ್ಥೆ, ದಿನಸಿ ವ್ಯವಸ್ಥೆ ಮಾಡಲಾಗುತ್ತಿದ್ದು ಇದರ ಸಂಪೂರ್ಣ ನಿರ್ವಹಣೆ ಬಿಬಿಎಂಪಿ
ಮಾಡುತ್ತದೆ. ಹೀಗಾಗಿ ಯಾರು ಕೂಡ ಸದ್ಯ ಇರುವ ಸ್ಥಳ ಬಿಟ್ಟು ಬೇರೆ ಪ್ರದೇಶಕ್ಕೆ
ಹೋಗದಂತೆ ತಡೆಹಿಡಿಯಬೇಕು. ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಇದರ ನಿರ್ವಹಣೆ
ಮಾಡುವ ಮೂಲಕ ಎಲ್ಲರಿಗೂ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.ಕೊರೊನಾ
ವೈರಸ್ ಸೋಂಕು ತಡೆಗಟ್ಟಲು ದೇಶವ್ಯಾಪಿ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ
ಬಿಬಿಎಂಪಿ ಸದ್ಯಕ್ಕೆ ಬಾಡಿಗೆದಾರರ ಬಳಿ ಬಾಡಿಗೆ ಕೇಳುವಂತಿಲ್ಲ. ಅಲ್ಲದೇ, ಖಾಸಗಿಯವರೂ
ಕೂಡ ಬಾಡಿಗೆ ಕೇಳಬಾರದು ಎಂದು ವಿನಂತಿ ಮಾಡಿಕೊಳ್ಳುವುದಾಗಿ ತಿಳಿಸಿದ ಅವರು, ಅಲ್ಲದೇ,
ಡಾಕ್ಟರ್, ನರ್ಸ್ ಗಳಿಗೂ ತೊಂದರೆ ನೀಡದರೂ ದೂರು ದಾಖಲಾಗುತ್ತದೆ ಎಂದು ಖಡಕ್ ಎಚ್ಚರಿಕೆ
ನೀಡಿದರು.ಸಭೆಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ, ಸಿಎಸ್ ವಿಜಯ ಭಾಸ್ಕರ್,
ಡಿಜಿ-ಐಜಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಗರದ ಎಲ್ಲಾ
ಡಿಸಿಪಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ಮೂಲಕ ಸಭೆ ನಡೆಸಲಾಗಿತ್ತು.ಕೆಲವು ಸಂದರ್ಭಗಳಲ್ಲಿ
ಲಾಠಿ ಪ್ರಯೋಗ ಮಾಡಿಲಾಗಿದೆ. ಕೆಲವರು ಸರಿ ಇದೆ ಎಂದರೆ , ಕೆಲವರು ಸರಿಯಿಲ್ಲ ಎಂದು
ಹೇಳಿದ್ದಾರೆ. ತಳಮಟ್ಟದಲ್ಲಿ ಕೆಲಸ ಮಾಡುವಾಗ ಇದೆಲ್ಲ ಸಾಮಾನ್ಯ. ಆದಷ್ಟು ಸಾಮ, ಬೇದ,
ದಂಡ ಎನ್ನುವ ತಂತ್ರ ಪ್ರಯೋಗಿಸುವಂತೆ ಸೂಚಿಸಿದ್ದೇವೆ ಎಂದು ಬಸವರಾಜ ಬೊಮ್ಮಾಯಿ
ಹೇಳಿದರು.