ಮನೆ ಮನೆಗೆ ತೆರಳಿ ವೈದ್ಯರಿಂದ ಆರೋಗ್ಯ ತಪಾಸಣೆ

ಲೋಕದರ್ಶನವರದಿ

ಶಿಗ್ಗಾವಿ೦೯: ಕೊರೊನಾ ತಡೆಯುವ ನಿಟ್ಟಿನಲ್ಲಿ ತಾಲೂಕಿನ ವೈದ್ಯರು ಪಣತೊಟ್ಟಿದ್ದು ಸರಕಾರಿ ವೈದ್ಯರ ಜೊತೆಗೆ ಖಾಸಗಿ ಆಸ್ಪತ್ರೆಯ ವೈದ್ಯರೂ ಸಹಿತ ಜೊತೆಗೂಡಿ ಶಿಗ್ಗಾವಿ ಪಟ್ಟಣದ ಪ್ರತಿ ಮನೆ ಮನೆಗೆ ತೆರಳಿ ಜನತೆಯ ಆರೋಗ್ಯ ತಪಾಸಣೆ ಮಾಡಿ ಅರಿವು ಮೂಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಗುರುವಾರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಅವರೊಂದಿಗೆ ಸಭೆ ನಡೆಸಿದ ಖಾಸಗೀ ವೈದ್ಯರ ಸಂಘದ ಸದಸ್ಯರು ಶುಕ್ರವಾರ ಬೆಳಿಗ್ಗೆ 7 ಘಂಟೆಯಿಂದಲೇ ಪ್ರತಿ ವಾರ್ಡಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿ ಜನತೆಗೆ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಿದರು.

ಇಲ್ಲಿಯವರೆಗೂ ಶಿಗ್ಗಾವಿ ತಾಲೂಕಿನಲ್ಲಿ ಯಾವುದೇ ಕೋರೋನಾ ಸೋಂಕಿತರು ಕಂಡು ಬಂದಿಲ್ಲ ಈ ವರದಿಯನ್ನೇ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಸಾರ್ವಜನಿಕರು ವೈದ್ಯರ ಸಲಹೆ ಮತ್ತು ಪೋಲೀಸರ ನಿಯಮಗಳನ್ನ ಪಾಲಿಸಬೇಕು ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ವಿನಾಕಾರಣ ಅಲೆದಾಟ ಬೇಡ ವಯೋವೃದ್ದರು ಆದಷ್ಟು ಮನೆಯಲ್ಲಿಯೇ ಇರಿ, ಅಂತರ ಕಾಯ್ದುಕೊಳ್ಳುವ ಮೂಲಕ ಸಹಕಾರ ನೀಡಬೇಕು ಎಂದು ಜಾಗೃತಿ ಮೂಡಿಸಿದರು.  

ಇಲ್ಲಿಯವೆಗೆರೂ ಲಾಕ್ಡೌನ್ ಸಡಿಲಿಕೆಯಿಂದ ಅಲ್ಲಲ್ಲಿ ಆಶ್ರಯ ಪಡೆದಿದ್ದ ಜನತೆ ಈಗ ಮರಳಿ ತಮ್ಮ ತಮ್ಮ ಖಾಯಂ ಸ್ಥಳಗಳಿಗೆ ಬಂದಿದ್ದು ಆವರ ಆರೋಗ್ಯ ತಪಾಸಣೆ ಮಾಡಿ ಜನತೆಗೆ ಇರುವ ಭಯದ ವಾತಾವರಣ ದೂರ ಮಾಡುವ ನಿಟ್ಟಿನಲ್ಲಿ ಈ ತಪಾಸಣೆ ಕೈಗೊಂಡಿದ್ದು ರೆಡ್ಝೋನ್ ನಲ್ಲಿರುವ ಪ್ರದೇಶಗಳಿಂದ ಬಂದ ಪ್ರತಿಯೋಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು 15 -20 ದಿನಗಳ ವರೆಗೆ ಮನೆಯಲ್ಲಿಯೇ (ಹೋಮ್ಕ್ವಾರಂಟೈನ್) ಇರಬೇಕು ಎಂದು ಸಲಹೆ ನೀಡಲಾಗಿದೆ ಎನ್ನುತ್ತಾರೆ ಖಾಸಗಿ ವೈದ್ಯರ ಸಂಘದ ಅದ್ಯಕ್ಷರಾದ ಡಾ. ಕೆ ಪ್ರಶಾಂತ ಅವರು.

ಮಹಾಮಾರಿ ಕೋರೋನಾ ಚಿಕಿತ್ಸೆಯು ಸರಕಾರಿ ವೈದ್ಯರಿಗೆ ಅಷ್ಟೆ ಸೀಮಿತ ಮಾಡದೇ ಖಾಸಗೀ ವೈದ್ಯರೂ ಸಹಿತ ಮುಂದೆ ಬಂದು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಗಿದೆ ಎನ್ನಬಹುದು.

     ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ , ಆಶಾ ಕಾರ್ಯಕತರ್ೆಯರು ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರುಗಳಿಗೆ ಸಾತ್ ನೀಡುದರು