ಜೈಲಿನಿಂದ ಬಿಡುಗಡೆಯಾದ ರೊನಾಲ್ಡಿನೊಗೆ ಗೃಹ ಬಂಧನ

ಅಸುನ್ಸಿಯಾನ್, ಏ 9,ಬ್ರೆಜಿಲ್ ನ ಮಾಜಿ ಸ್ಟಾರ್ ಫಾರ್ವರ್ಡ್ ಆಟಗಾರ ರೊನಾಲ್ಡಿನೊ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಪರಾಗ್ವೆಯಲ್ಲಿ ಗೃಹ ಬಂಧನದಲ್ಲಿರಿಸಲಾಗಿದೆ.ರೊನಾಲ್ಡಿನೊ ಮತ್ತು ಆತನ ಸಹೋದಾರ ರಾಬರ್ಟೊ ಆಸೀಸ್ ಇಬ್ಬರೂ ತಪ್ಪು ಮಾಡಿರುವುದನ್ನು ನಿರಾಕರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.ಅವರ ವಕೀಲ ಕೂಡ ಜೈಲುವಾಸವನ್ನು, ಅನಿಯಂತ್ರಿತ, ನಿಂದನೀಯ ಮತ್ತು ಕಾನೂನುಬಾಹಿರ ಎಂದು ಕರೆದಿದ್ದಾರೆ.ನ್ಯಾಯಧೀಶ ಗುಸ್ವಾವೊ ಅಮರಿಲ್ಲಾಅವರು, ಈ ಜೋಡಿಯು ಜೈಲಿನಿಂದ ಹೊರಹೋಗಲು ಪಾವತಿಸಿದ ಜಾಮೀನು ಮಹತ್ವದ್ದಾಗಿದೆ ಹಾಗೂ ಅವರು ಪಲಾಯನ ಮಾಡುವುದಿಲ್ಲ ಎಂದು ಖಾತರಿಪಡಿಸುತ್ತದೆ, ಎಂದು ಹೇಳಿರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.ನಕಲಿ ಪಾಸ್ ಪೋರ್ಟ್ ಗಳನ್ನು ಬಳಸಿ ರೊನಾಲ್ಡಿನೊ ಮತ್ತು ಆತನ ಸಹೋದರ ಪರಾಗ್ವೆ ಪ್ರವೇಶಿಸಿದ ಕಾರಣ ಮಾರ್ಚ್ 6ರಂದು ಅವರನ್ನು ಬಂಧಿಸಿ, ಅಸುನ್ಸಿಯಾನ್ ಜೈಲಿನಲ್ಲಿ ಇಡಲಾಗಿತ್ತು.