ಉಗರಗೋಳ 15: ಕಾಮ, ಕ್ರೋಧ ದಹನದ ಸಂಕೇತವಾದ ಹೋಳಿ ಹುಣ್ಣಿಮೆಯನ್ನು ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಪರಸ್ಪರರು ಬಣ್ಣ ಹಚ್ಚುವ ಮೂಲಕ ರಂಗಿನಾಟಕ್ಕೆ ಮೆರಗು ತಂದರು. ಸರ್ವಧರ್ಮೀಯರು ಭಾಗವಹಿಸಿ ಭಾವೈಕ್ಯತೆ ಸಾರಿದರು.
ಗ್ರಾಮದ ಪೇಟೆಯಲ್ಲಿರುವ ಬೆಣ್ಣಿ ಕಟ್ಟೆ ಬಯಲಿನಲ್ಲಿ ಕಾಮಣ್ಣನ ದಹನ ಮಾಡಲಾಯಿತು. ನಂತರದಲ್ಲಿ ಗ್ರಾಮಸ್ಥರು ಬಣ್ಣ ಎರಚಿ ಸಂಭ್ರಮಿಸಿದರು. ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ವೇಷಧಾರಿಗಳಲ್ಲಿ ಗ್ರಾಮದ ಬೀದಿ ಬೀದಿಗಳಲ್ಲಿ ಯುವಕರು ಸಂಚರಿಸಿ, ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಹೋಳಿ ಹಬ್ಬದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಹೋಳಿ ಹಬ್ಬವನ್ನು ಗ್ರಾಮದಲ್ಲಿನ ಹಿರಿಯರು, ಮಹಿಳೆಯರು, ಮಕ್ಕಳು ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರು.