ಪಟ್ಟಣದ ಎಸ್‌.ಎಸ್‌. ವಿದ್ಯಾಸಂಸ್ಥೆಯಲ್ಲಿ ರಂಗಿನಾಟ

Holi celebration- Talikoti news- 15-03

ತಾಳಿಕೋಟಿ 15: ಶ್ರೀ ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಚ್‌.ಎಸ್‌.ಪಾಟೀಲ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಸಂಭ್ರಮದಿಂದ ಹೋಳಿ ಹಬ್ಬದ ಕಾರ್ಯಕ್ರಮ ಶನಿವಾರ ಆಚರಿಸಲಾಯಿತು. 

ಈ ಸಂಭ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರ ಧರ್ಮಪತ್ನಿ ಎಸ್‌.ಎಚ್‌.ಪಾಟೀಲ. ಮುಖ್ಯಗುರುಮಾತೆ ಮೀರಾ ದೇಶಪಾಂಡೆ, ಕುಮಾರಿ ಸುಕನ್ಯಾ, ದುರ್ಗಾ, ನಂದಿನಿ, ಬಸಮ್ಮ, ಕುಮಾರಿ ಸುಷ್ಮಾ, ಕುಮಾರ ಸುರೇಶ ದೊಡಮನಿ ಹಾಗೂ ಶಾಲೆಯ ವಿದ್ಯಾರ್ಥಿಗಳ ಪಾಲಕರಾದ ಗಾಯತ್ರಿ ಪತ್ತಾರ,ಶ್ರೀಮತಿ ನೇತ್ರಾ ಚಂದೂರಕರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.