ಬಣ್ಣದ ಹಬ್ಬದಲ್ಲಿ ಮಿಂದೆದ್ದ ಸಿಂದಗಿ ಜನತೆ: ವಿಜಯಕುಮಾರ ಪತ್ತಾರ

Holi Festival celebration- Sindagi news

ಚರ್ಮದ ಹಲಿಗೆಗಳ ಬದಲು ಪೈಬರ್ ಹಲಿಗೆಗಳ ಸದ್ದು-  ಮುದ್ದು ಮಕ್ಕಳಿದಂದ ಪರಸ್ಪರ ಬಣ್ಣ ಎರೆಚಾಟ 

ಸಿಂದಗಿ  14 : ಜಾಗತೀಕರಣದ ಭರಾಟೆಯ ನಡುವೆ ಭಾರತದಲ್ಲಿ ಪಾರಂಪರಿಕವಾಗಿ ಬಂದಿರುವ ಹಬ್ಬಗಳು ನಶಿಸು ಹೋಗುತ್ತಿವೆ. ಆದರೆ ಹೋಳಿ ಹಬ್ಬವು ಇನ್ನು ಕೂಡಾ ತನ್ನ ಗತ್ತು ಗೈರತ್ತು ಮುಂದುವರೆಸಿಕೊಂಡು ಹೊರಟಿದೆ. ಏಕೆಂದರೆ ಬಣ್ಣದ ಹಬ್ಬವನ್ನು ಹೆಚ್ಚಾಗಿ ಯುವಜನಾಂಗವೇ ಆಚರಣೆ ಮಾಡುವುದರಿಂದ ಅದು ಇನ್ನು ಜೀವಂತವಾಗಿ ಉಳಿದಿದೆ. ಮೇಲಾಗಿ ಈ ಹಬ್ಬವನ್ನು ಜಾತಿ-ಮತ-ಪಂಥ ಮತ್ತು ಧರ್ಮ ಮೀರಿ ಎಲ್ಲರೂ ಆಚರಿಸುತ್ತಾರೆ. 

ಈ ಮೊದಲೆಲ್ಲ ಬಣ್ಣದ ಹಬ್ಬದ ದಿನದಂದು ಸಿಂದಗಿ ಪಟ್ಟಣದ ವಿವಿಧ ಬಡವಾಣೆಗಳ ಯುವಕರು ಬಣ್ಣದಾಟದಲ್ಲಿ ಮಿಂದೇಳುತ್ತಿದ್ದರು, ಜೊತೆಗೆ ಗೆಳೆರೆಯಲ್ಲರೂ ಕೂಡಿಕೊಂಡು ಗಂಡ-ಹೆಂಡತಿಯ ಸೋಗನ್ನು ಹಾಕಿ ಕೃತಕ ಶವಸಂಸ್ಕಾರದ ರೂಪಕವನ್ನು ಸೃಷ್ಟಿಸಿ, ಪಟ್ಟಣದ ತುಂಬೆಲ್ಲಾ ಶವದ ಮೆರವಣಿಗೆಯನ್ನು ಮಾಡುತ್ತ ಜನರನ್ನು ನಗೆಗಡಲಲ್ಲಿ ತೆಲಿಸುತ್ತಿದ್ದರು. ಹಿರಿಯರಾದವರು ಬಡಾವಣೆಗಳ ಅಥವಾ ಓಣಿಗಳ ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಹೋಳಿ ಹಬ್ಬದ ವಿಶೇಷ ಹಾಡುಗಳನ್ನು ಹಾಡುತ್ತ ಜನರನ್ನು ರಂಜಿಸುತ್ತಿದ್ದರು. ಆದರೆ ಇಂತಹ ಆಚರಣೆಗಳು ಮೆರಯಾಗಿದ್ದು ಈಗ ಕೇವಲ ರಂಗಿನಾಟಕ್ಕೆ ಮಾತ್ರ ಸೀಮಿತವಾಗಿದೆ.  

ಪಟ್ಟಣದಲ್ಲಿ ಈ ಬಾರಿಯ ಓಕಳಿ ಆಡುವಾಗ ಮನುಷ್ಯನ ಚರ್ಮಕ್ಕೆ ಮಾರಕವಾಗುವ ಸುನೇರ್ ಮತ್ತು ಬಳಚೂರ ಬಣ್ಣಗಳನ್ನು ಯುವಕರು ಬಳಸದೆ ಇರುವುದು ಸಂತಸದ ವಿಷಯ. ಆದರೆ ಕೆಲ ಯುವಕರು ಅಲ್ಲಲ್ಲಿ ಮೊಟ್ಟೆಗಳು ಒಡೆಯುತ್ತಿರುವುದು ಕಂಡುಬಂತು. ಚರ್ಮದ ಹಲಿಗೆಗಳು ಸಂಪೂರ್ಣ ಮಾಯವಾಗಿ ಪೈಬರ್ ಹಲಿಗೆಗಳೇ ಹೆಚ್ಚಿನ ಸದ್ದು ಜೋರಾಗಿತ್ತು. ಸಿಂದಗಿ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಬಣ್ಣದಾಟವು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಿಸಿಲಿನ ಪ್ರಖರತೆ ಹೆಚ್ಚಾದ ಕಾರಣಕ್ಕೆ ಅಂತ್ಯಗೊಂಡಿತು.  

ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ), ರವಿಗೌಡ ಬಿರಾದಾರ, ಬಸವರಾಜ ಬಿರಾದಾರ, ಬಸು ಉಪ್ಪಾರ, ಚನ್ನು ಮಠ, ಶ್ರೀಧರ ಬಿರಾದಾರ ಸೇರಿದಂತೆ ಅನೇಕರು ಬಣ್ಣದ ಹಬ್ಬದಲ್ಲಿ ಪಾಲ್ಗೊಂಡಿದ್ದರು.