ನವದೆಹಲಿ, ಏ 20,ಪಂದ್ಯದ ಅಂಪೈರ್‌ಗಳು ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಇತ್ತೀಚಿನ ಆಟದ ನಿಯಮಗಳನ್ನು ನವೀಕರಿಸಲು ಮತ್ತು ಅವರ ಫಿಟ್‌ನೆಸ್ ಮಟ್ಟವನ್ನು ಸುಧಾರಿಸಲು ಆನ್‌ಲೈನ್ ಸಮಾಲೋಚನಾ ಅಧಿವೇಶನಗಳನ್ನು ಪ್ರಾರಂಭಿಸುವುದಾಗಿ ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ.ಹಾಕಿ ಇಂಡಿಯಾವು ಆರು ವಾಟ್ಸಾಪ್ ಗುಂಪುಗಳಲ್ಲಿ, ತಾಂತ್ರಿಕ ಅಧಿಕಾರಿಗಳಿಗೆ ಮೂರು ಮತ್ತು ಅಂಪೈರ್‌ಗಳಿಗೆ ಮೂರು ಸೆಷನ್‌ಗಳನ್ನು ನಡೆಸುತ್ತಿದೆ. 100ಕ್ಕೂ ಹೆಚ್ಚು ನೋಂದಾಯಿತ ಅಧಿಕಾರಿಗಳು ವಾರದಲ್ಲಿ ಆರು ದಿನಗಳು ಈ ಉಪಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಎಚ್‌ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಮೊಘಲ್ ಮೊಹಮ್ಮದ್ ಮುನೀರ್, ಕ್ಲಾಡಿಯಸ್ ಡಿ ಸೇಲ್ಸ್ ಮತ್ತು ಎಚ್ ಎಸ್ ಸೊಖಿ ಸೇರಿದಂತೆ ಹಲವರು ಅಧಿವೇಶನಗಳನ್ನು ನಡೆಸುತ್ತಿರುವ ಅನುಭವಿ ಪಂದ್ಯಾವಳಿ ನಿರ್ದೇಶಕರು ಮತ್ತು ಅಂಪೈರ್ ಮತ್ತು ಮ್ಯಾನೇಜರ್ ಗಳಾಗಿದ್ದಾರೆ. ಜಿ ಎಸ್ ಸಂಘ, ಜಾವೇದ್ ಶೇಖ್ ಮತ್ತು ಜಿ ಹರ್ಷ ವರ್ಧನ್ ಅವರು ಅಂಪೈರ್‌ಗಳಿಗಾಗಿ ಸೆಷನ್‌ಗಳನ್ನು ನಡೆಸುತ್ತಿದ್ದಾರೆ.
ಸಂವಾದಾತ್ಮಕ ಅಧಿವೇಶನಗಳ ಮೂಲಕ, ಅಧಿಕಾರಿಗಳು ಎಫ್‌ಐಹೆಚ್ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ತಮ್ಮ ಜ್ಞಾನವನ್ನು ಸುಧಾರಿಸಿಕೊಳ್ಳುತ್ತಾರೆ ಮತ್ತು ಯಾವುದೇ ಪ್ರಶ್ನೆಗಳು ಅಥವಾ ಅನುಮಾನಗಳನ್ನು ತೆರವುಗೊಳಿಸಲು ಈ ಸೆಷನ್ ನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.