ಹಾಕಿ: ಬ್ರಿಟನ್ ವಿರುದ್ಧ ಸೋಲು ಒಪ್ಪಿಕೊಂಡ ಭಾರತ ವನಿತೆಯರು

ಮಾಲರ್ೊ, ಅ 3:  ಭಾರತ ಮಹಿಳೆಯರ ಹಾಕಿ ತಂಡ ಬುಧವಾರ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ತಂಡದ ವಿರುದ್ಧ  1-3 ಅಂತರದಲ್ಲಿ ಸೋಲು ಅನುಭವಿಸಿತು.  ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಪ್ರದರ್ಶನ ತೋರಿದ ಉಭಯ ತಂಡಗಳು ಮೊದಲನೇ ಗೋಲನ್ನು ಬಹುಬೇಗ ಗಳಿಸಿದವು. ಆತಿಥೇಯ ಬ್ರಿಟನ್ಗೆ ಆರಂಭದಲ್ಲೇ ಹನ್ನಾಹ್ ಮಾಟರ್ಿನ್ ಗೋಲಿನ ಖಾತೆ ತೆರೆದರು. ಇದಾದ ಕೆಲವೇ ನಿಮಿಷಗಳಲ್ಲಿ ನೇಹಾ ಗೋಯಲ್ ಅವರು ಗೋಲು ಗಳಿಸಿ ಸಮಬಲ ಸಾಧಿಸುವಲ್ಲಿ ನೆರವಾದರು. ಮೊದಲ ಕ್ವಾರ್ಟರ್ನ ಕೊನೆಯ ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಮೊದಲ ಅವಧಿ ಮುಕ್ತಾಯಕ್ಕೂ ಮುನ್ನ 29ನೇ ನಿಮಿಷದಲ್ಲಿ ಗ್ರೇಟ್ ಬ್ರಿಟನ್ 2-1 ಮುನ್ನಡೆ ಸಂಪಾಧಿಸಿತು. ಮೂರನೇ ಕ್ವಾರ್ಟರ್ನಲ್ಲಿ ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವೆ ಭಾರಿ ಪೈಪೋಟಿ ನಡೆಯಿತು. ಆದರೆ, ಗೋಲು ಗಳಿಸುವಲ್ಲಿ ಸಾಧ್ಯವಾಗಲಿಲ್ಲ.  ನಂತರ, ಕೊನೆಯ ಕ್ವಾರ್ಟರ್ನಲ್ಲಿ ಗಿಸೆಲ್ಲಿ ಆ್ಯನ್ಸ್ಲೆ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಗ್ರೇಟ್ ಬ್ರಿಟನ್ಗೆ ಮೊದಲ ಗೆಲುವಿಗೆ ಸಹಕರಿಸಿದರು. ಅಂತಿಮವಾಗಿ ಆತಿಥೇಯ ಗ್ರೇಟ್ ಬ್ರಿಟನ್ 3-1 ಅಂತರದಲ್ಲಿ ಗೆಲುವಿನ ನಗೆ ಬೀರಿತು.  ಮೊದಲನೇ ಪಂದ್ಯದಲ್ಲಿ ಭಾರತ 2-1 ಅಂತರದಲ್ಲಿ ಜಯ ಸಾಧಿಸಿತ್ತು. ಮುಂದಿನ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿತ್ತು. ನಾಲ್ಕನೇ ಪಂದ್ಯದಲ್ಲಿ ಬ್ರಿಟನ್ ಗೆದ್ದು ಸರಣಿಯನ್ನು 1-1 ಸಮಬಲ ಸಾಧಿಸಿಕೊಂಡಿತು.