ಬೆಳಗಾವಿ : ಖಾನಾಪೂರ ತಾಲೂಕಿನ ಹಿರೇಅಂಗ್ರೋಳ್ಳಿ ಗ್ರಾಮವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು ಹಾಗೂ ರೈತರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಹಲವಾರು ಗ್ರಾಮಸ್ಥರು ಈ ಕುರಿತು ಮನವಿಯೊಂದನ್ನು ಸಲ್ಲಿಸಿ, ಖಾನಾಪೂರ ತಾಲೂಕಿನ ಹಿರೇಅಂಗ್ರೋಳ್ಳಿ ಗ್ರಾಮದ ಲಕ್ಷ್ಮೀ ದೇವಿಯ ಹಾಗೂ ಕಂಚಿರೇಶ್ವರ ಜಾತ್ರೆಗಳನ್ನು ಬರುವ ಮೇ. 3ರಿಂದ 13ರವರೆಗೆ ನಡೆಸಲು ಗ್ರಾಮಸ್ಥರು ತೀಮರ್ಾನಿಸಿದ್ದಾರೆ. ಗ್ರಾಮದೇವತೆಯಾದ ಲಕ್ಷ್ಮೀ ದೇವೆಯ ಜಾತ್ರೆಯು 20 ವರ್ಷದ ಬಳಿಕ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬಸ್ ನಿಲ್ದಾಣವು ಶಿಥೀಲ್ಗೊಂಡಿದೆ. ಅಲ್ಲದೆ ಬಸ್ಸಿನ ಸೌಕರ್ಯವು ಸರಿಯಾಗಿ ಇರುವದಿಲ್ಲ. ನಿಲ್ದಾಣದ ಜತೆಗೆ ಬಸ್ಸಿನ ಸೌಕರ್ಯ ಮಾಡಿಕೊಡಬೇಕು.
ಗ್ರಾಮಕ್ಕೆ ಸಂಪರ್ಕದ ಹಾಗೂ ಗ್ರಾಮದಲ್ಲಿ ಸರಿಯಾದ ರಸ್ತೆ ಸೌಕರ್ಯ ಇಲ್ಲದಿರುವದರಿಂದ ಡಾಂಬರಿ ರಸ್ತೆ ನಿಮರ್ಿಸುವಂತೆ, ವಿದ್ಯುತ್ ಕಂಬಗಳ ಜತೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿಕೊಡುವಂತೆ, ಸಾಮೂಹಿಕ ಶೌಚಾಲಯ ನಿಮರ್ಿಸುವಂತೆ ಹಾಗೂ ಜಾತ್ರೆಯ ಸಮಯದಲ್ಲಿ ಅಂಬ್ಯುಲನ್ಸ್ ನೀಡುವಂತೆ ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.