ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಗಿ ಕಲ್ಲಟ್ಟಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಆಯ್ಕೆ : ದೂರ ಉಳಿದ ನಿಖಿಲ್ ಕತ್ತಿ

Hiranyakesi Sugar Factory President Ragi Kallatti Elected Vice President Pattanashetty : Nikhil Katt

ಸಂಕೇಶ್ವರ : ಇಲ್ಲಿನ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಬಸವರಾಜ ಕಲ್ಲಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಟ್ಟಣಶೆಟ್ಟಿ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ. ಆದರೆ ಮಾಜಿ ಅಧ್ಯಕ್ಷ ನಿಖಿಲ್ ಕತ್ತಿ ಅವರು ಈ ಆಯ್ಕೆಯಿಂದ ದೂರ ಉಳಿದಿರುವದು ಹಲಾವರು ಅನುಮಾನಗಳಿಗೆ ಎಡೆಮಾಡಿದೆ

     ಸಕ್ಕರೆ ಕಾರ್ಖಾನೆಯ ಸಭಾಗೃಹದಲ್ಲಿ ಮಂಗಳವಾರ ಬೆಳಿಗ್ಗೆ ಸಭೆ ಸೇರಿದ ಸದಸ್ಯರು ಬಸವರಾಜ ಕಲ್ಲಟ್ಟಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಪಟ್ಟಣಶೆಟ್ಟಿ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡುವ ಮೂಲಕ ಘೋಷಣೆ ಮಾಡಲಾಯಿತು. ಆದರೆ ಈ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸಭೆಯಿಂದ ಮಾಜಿ ಅಧ್ಯಕ್ಷ ನಿಖಿಲ್ ಕತ್ತಿ ಅವರು ದೂರ ಉಳಿಯುವ ಮೂಲಕ ಎಲ್ಲರು ಪ್ರಶ್ನೆ ಮಾಡುವಂತಾಗಿದೆ.