ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ

Savadatti Yallammadevi is a goddess of great power: Veerabhadra Neelannavara

ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ: ವೀರಭದ್ರ ನೀಲಣ್ಣವರ  

ಬೆಟಗೇರಿ, 11; ಬಹಳ ಹಿಂದಿನಿಂದಲೂ ನಮ್ಮ ದೇಶದ ಜನರು ದೇವರ ಮೇಲೆ ಅಪಾರ ಭಯ, ಭಕ್ತಿಯುಳ್ಳವರಾಗಿದ್ದಾರೆ. ಪ್ರತಿಯೊಬ್ಬರೂ ಧಾರ್ಮಿಕ ಪರಂಪರೆ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಪೊಲೀಸ್ ಇಲಾಖೆಯ ನಿವೃತ್ತ ಎಎಸ್‌ಐ ವೀರಭದ್ರ ನೀಲಣ್ಣವರ ಹೇಳಿದರು. 

   ಭಾರತ ಹುಣ್ಣಿಮೆ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಫೆ.11ರಂದು ಆಯೋಜಿಸಿದ ಶ್ರೀದೇವಿಯ ಜಾತ್ರಾಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಸವದತ್ತಿ ಯಲ್ಲಮ್ಮದೇವಿ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದರು. 

ಸಂಭ್ರಮದಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳು: ಬೆಟಗೇರಿ ಗ್ರಾಮದ ಯಲ್ಲಮ್ಮದೇವಿಯ ದೇವಾಲಯದ ಗದ್ಗುಗೆಗೆ ಫೆ.10ರಂದು ಪೂಜೆ, ಪುರದೇವರ ಪಲ್ಲಕ್ಕಿಗಳ ಬರಮಾಡಿಕೊಳ್ಳುವುದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಫೆ.11ರಂದು ಯಲ್ಲಮ್ಮದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ​‍್ಿಸುವ, ಶ್ರೀದೇವಿಗೆ ಉಡಿ, ಹಡಲಗಿ ತುಂಬುವ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ನಡೆದು, ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಬಳಿಕ ಪ್ರಸಕ್ತ ಜಾತ್ರಾಮಹೋತ್ಸವ ಸಮಾರೊಪಗೊಂಡಿತು. 

    ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ಮುತ್ತೆಪ್ಪ ಮಾಕಾಳಿ, ಲಕ್ಷ್ಮಣ ಚಿನ್ನನ್ನವರ, ಶಿವಾಜಿ ನೀಲಣ್ಣವರ, ವಿಠಲ ಚಂದರಗಿ, ವಿಠಲ ಕೋಣಿ, ಯಲ್ಲಪ್ಪ ಮಿರ್ಜಿ, ಮುತ್ತೆಪ್ಪ ವಡೇರ, ರಾಮಣ್ಣ ನೀಲಣ್ಣವರ, ದುಂಡಪ್ಪ ಹಾಲಣ್ಣವರ, ಸ್ಥಳೀಯ ಸರ್ವ ಸಮಾಜದ ಮುಖಂಡರು, ಗಣ್ಯರು, ಇಲ್ಲಿಯ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಸಮಿತಿ ಸದಸ್ಯರು, ಭಕ್ತರು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.