ಹಿಂದೂ ಮಾಹಾ ಗಣಪತಿ ಸೇವಾ ಸಮಿತಿ ಲೋಕಾರ್ಪಣೆ

ಶಿಗ್ಗಾವಿ05 : ತಾಲೂಕಿನ ಬಂಕಾಪುರ ಪಟ್ಟಣಕ್ಕೆ ಅವಶ್ಯವಿರುವ ಮುಕ್ತಿ ವಾಹಿನಿಯನ್ನು ಹಿಂದೂ ಮಹಾ ಗಣಪತಿ ಸೇವಾ ಸಮಿತಿಯವರು ಲೋಕಾರ್ಪಣೆ ಗೊಳಿಸಿರುವುದು ಅತ್ಯಂತ ಮಹತ್ವಪೂರ್ಣ ವಿಚಾರವಾಗಿದೆ ಎಂದು ಹಿರಿಯ ಸಾಹಿತಿ ಎ.ಕೆ.ಆದವಾನಿಮಠ ಹೇಳಿದರು.

     ಪಟ್ಟಣದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನೂತನ ಮುಕ್ತಿ ವಾಹಿನಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪಟ್ಟಣದಿಂದ ಹಿಂದೂ ಸ್ಮಶಾನ ಎರಡರಿಂದ, ಎರಡೂವರೆ ಕಿ.ಮಿ.ದೂರಲ್ಲಿದ್ದು, ಶವವನ್ನು ಅಲ್ಲಿಯವರೆಗೆ ಹೊತ್ತುಕೋಂಡು ಹೋಗಿ ಅಂತ್ಯ ಸಂಸ್ಕಾರ ಮಾಡಬೇಕಿತ್ತು. ಇಲ್ಲವೆ ಶಿಗ್ಗಾವಿ ಅಥವಾ ಸವಣೂರಿನಿಂದ ಮುಕ್ತಿವಾಹನವನ್ನು ಕರೆಯಿಸಿಕೊಳ್ಳಬೇಕಿತ್ತು. ಇಂತಹ ಒಂದು ಸನ್ನಿವೇಶದಲ್ಲಿ ಪಟ್ಟಣಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅನಕೂಲವಾಗುವ ಉದ್ದೇಶದಿಂದ ಹಿಂದೂ ಮಹಾ ಗಣಪತಿ ಸೇವಾ ಸಮಿತಿಯವರು ಮುಕ್ತಿ ವಾಹಿನಿಯನ್ನು ಲೋಕಾರ್ಪಣೆ ಗೊಳಿಸಿರುವುದು ಅತ್ಯಂತ ಮಹತ್ವ ಪೂರ್ಣ ಕಾರ್ಯಗಳಲ್ಲೊಂದಾಗಿದೆ. ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಸಿಕೊಳ್ಳುವಂತೆ ಸೂಚಿಸಿದರು.

     ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ, ಸೋಮಶೇಖರ ಗೌರಿಮಠ, ಗಂಗಾಧರ ಮಾ.ಪ.ಶೆಟ್ಟರ, ಹೊನ್ನಪ್ಪ ಹೂಗಾರ, ಶಿವಾನಂದ ದೇವಸೂರ, ಮಹಬಳೆಶ ಹೊನಕೇರಿ, ಶೇಖಯ್ಯ ಕಟಗಿಮಠ, ಚನ್ನಕುಮಾರ ದೇಸಾಯಿ, ಗದಿಗಯ್ಯ ಹುಣಸಿಕಟ್ಟಿಮಠ, ಗಂಗಾಧರ ಬಡ್ಡಿ, ಜಗದೀಶ ಹುರಳಿ ಸೇರಿದಂತೆ ಮತ್ತಿತರರು ಇದ್ದರು.