ಹಿಂದಿ ಸಪ್ತಾಹ: ಪ್ರಧಾನಿ ಶುಭಾಶಯ

ನವದೆಹಲಿ, ಸೆಪ್ಟೆಂಬರ್ 14   ಹಿಂದಿ ದಿವಸದ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವಿಟ್ ಮಾಡಿದ ಅವರು, ಭಾಷೆಯ ಸರಳತೆ, ಸ್ವಾಭಾವಿಕತೆ ಮತ್ತು ಸಭ್ಯತೆ ಅಭಿವ್ಯಕ್ತಿಗೆ ಸರಿಯಾದ ಅರ್ಥ ನೀಡಲಿದೆ, ಹಿಂದಿ ಭಾಷೆ ಈ ಅಂಶಗಳನ್ನು ಸುಂದರವಾಗಿ ಒಟ್ಟುಗೂಡಿಸಿದೆ ಎಂದರು. ಗೃಹ ಸಚಿವ ಅಮಿತ್ ಶಾ ಅವರೂ ಸಹ ರಾಷ್ಟ್ರದ ಜನರಿಗೆ ಹಿಂದಿ ದಿವಾಸ್ ಶುಭಾಶಯ ತಿಳಿಸಿ,ಭಾಷೆಯ ಮಹತ್ವಕ್ಕೆ ಒತ್ತು ನೀಡುವಂತೆ ಕರೆ ನೀಡಿದರು. ಹಿಂದಿ ದಿವಸದ ಅಂಗವಾಗಿ  ಹಲವಾರು ಸಕರ್ಾರಿ ಇಲಾಖೆಗಳು ಹದಿನೈದು ದಿನಗಳ ಮಟ್ಟಿಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿವೆ.