ಲೋಕದರ್ಶನ ವರದಿ
ಹುಕ್ಕೇರಿ 04: ಸ್ಥಳೀಯ ಸುಕ್ಷೇತ್ರ ಗುಡ್ಡಾಪೂರದ ದಾನಮ್ಮಾದೇವಿ ಪಾದಯಾತ್ರೆ ಕಮೀಟಿ ಝೊಂಡ ಗಲ್ಲಿ ಇವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬುಧವಾರದಂದು 200 ಕ್ಕೂ ಮಿಕ್ಕಿ ಭಕ್ತಾದಿಗಳು ಬೆಳಗಿನ ಜಾವ ಹುಕ್ಕೇರಿಯಿಂದ ಪಾದಯಾತ್ರೆ ಮುಖಾಂತರ ಗುಡ್ಡಾಪೂರದ ದಾನಮ್ಮಾ ದೇವಸ್ಥಾನಕ್ಕೆ ತೆರಳಿದರು ಪ್ರಥಮದಲ್ಲಿ ದಾನಮ್ಮಾ ದೇವಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಸಿ ಪಾದಯಾತ್ರಿಗಳನ್ನು ಬೀಳ್ಕೊಡಲಾಯಿತು.
ಮಂಗಳವಾರ ದಿನಾಂಕ 3 ರಂದು ಸಂಸುದ್ದಿ ಬುಧವಾರ ದಿ. 4ರಂದು ಹಲ್ಯಾಳ ಗುರುವಾರ ದಿ.5 ರಂದು ಕೊಹಳ್ಳಿ ಶುಕ್ರವಾರ ದಿ. 6ರಂದು ಮುಚ್ಚಂಡಿ (ಧರೆಖಾನ ದೇವಸ್ಥಾನ) ಯಲ್ಲಿ ರಾತ್ರಿ ವಾಸ್ತವ್ಯ ಮಾಡಿ ಶನಿವಾರ ದಿ. 7 ರಂದು ಗುಡ್ಡಾಪೂರ ದಾನಮ್ಮಾ ದೇವಸ್ಥಾನ ತಲುಪಲಿದ್ದಾರೆ. ಅದೇ ದಿನ ಸಂಜೆ 7 ಘಂಟೆಗೆ ಹುಕ್ಕೇರಿ ವಿರಕ್ತ ಹಾಗೂ ಹಾವೇರಿ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮಿಗಳು ಕಾತರ್ಿಕೋತ್ಸವವನ್ನು ಉದ್ಘಾಟಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಭಕ್ತಾದಿಗಳು ಸಂಯೋಜಕರಾದ ಅಜೀತ ಚೌಗಲಾ, ಬಸವರಾಜ ನಾಯಿಕ, ದುಂಡಯ್ಯಾ ಮಠಪತಿ, ಉದಯ ಮಠಪತಿ, ನಿಂಗಯ್ಯಾ ಮಠಪತಿ, ಪಂಪಾವತಿ ಗಣಾಚಾರಿ ಗಿರೀಶ ಪಾಟೀಲ, ಅಣ್ಣಯ್ಯಾ ವಿಭೂತಿ, ಬಸವರಾಜ ಮಂಕಾಳೆ, ಆನಂದ ಪೋತದಾರ ಭೀಮ ಬಡಿಗೇರ, ರಮೇಶ ಪಾಟೀಲ, ಮಂಜುಳಾ ನಾಯಿಕ, ಶೋಭಾ ಗಣಾಚಾರಿ, ಪಾರ್ವತಿ ಸಂಣ್ಣವರ, ಶ್ರೀಮತಿ ಶೇವಾಳಿ (ನಿಪ್ಪಾಣಿ), ಜಯಶ್ರೀ ಮಠಪತಿ (ಹಿಟ್ನಿ) ಯನ್ನೋಳಗೊಂಡಂತೆ ಇನ್ನಿತರ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.