ಲೋಕದರ್ಶನ ವರದಿ
ಕೊಪ್ಪಳ: ರೂ.75 ಲಕ್ಷದ ಸರಕಾರಿ ಮಹಿಳಾ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿ ನಿಮರ್ಾಣ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸುಮಾರು 20 ವರ್ಷಗಳ ಬೇಡಿಕೆಯಾಗಿದ್ದ ಮಹಿಳಾ ಪದವಿ ಕಾಲೇಜು ಪೂರ್ಣಗೊಂಡಿದ್ದು, ವಿಧ್ಯಾರ್ಥಿಗಳ ಸಂಖ್ಯೆಯು ಪ್ರತಿ ವರ್ಷವೂ ಹೆಚ್ಚಾಗುತ್ತಿದ್ದು, ಅದರ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಚುಕನಕಲ್ ಗ್ರಾಮದ ಬಳಿ ಅಂದಾಜು ಮೊತ್ತ ರೂ.10 ಕೋಟಿ ವೆಚ್ಚದಲ್ಲಿ ಪಿ.ಜಿ.ಸೆಂಟರ್ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಕೊಪ್ಪಳ ನಗರದಲ್ಲಿ ವೈದ್ಯಕೀಯ ಶಿಕ್ಷಣ ಕಾಲೇಜು ಹಾಗೂ ಬಾನಾಪೂರ ಬಳಿ ಇಂಜೀನಿಯರಿಂಗ್ ಕಾಲೇಜು ಕಾರ್ಯ ಆರಂಬಿಸಿದ್ದು, ಈ ಭಾಗದ ವಿದ್ಯಾಥರ್ಿಗಳು ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಕೊಪ್ಪಳದ ಕೀತರ್ಿ ಹೆಚ್ಚಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಬೂಮರೆಡ್ಡಿ, ಮಾಜಿ ಪ್ರಾಧಿಕಾರ ಅಧ್ಯಕ್ಷ ಜುಲ್ಲು ಖಾದ್ರಿ, ಮಾಜಿ ಜಿ.ಪಂ.ಸದಸ್ಯ ಪ್ರಸನ್ನ ಗಡಾದ, ನಗರಸಭೆ ಸದಸ್ಯರುಗಳಾದ ಗುರುರಾಜ ಹಲಗೇರಿ, ಅಕ್ಬರಪಾಷಾ ಪಲ್ಟನ, ಉಮಾ ಪಾಟೀಲ, ಸಾಹಿತಿಗಳಾದ ಅಲ್ಲಮ ಪ್ರಭು ಬೇಟದೂರು, ಹೆಚ್.ಎಸ್.ಪಾಟೀಲ, ಬಸವರಾಜ ಅಕ್ಕಲವಾಡಿ, ಬಿ.ಜಿ.ಕರಿಗಾರ, ಅಕ್ತರ ಫಾರುಖಿ, ಸುರೇಶ ಮುಂಡರಗಿ, ಹಾರೂನಖಾನ್, ಪದವಿ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾಥರ್ಿನಿಗಳು ಉಪಸ್ಥಿತರಿದ್ದರು.