ಹಸಿದ ಕಟ್ಟಡ ಕೂಲಿಕಾರ್ಮಿಕರಿಗಾಗಿ ಹೆಲ್ಪ್ ಲೈನ್ ಆರಂಭ

ಬೆಂಗಳೂರು, ಮಾ 28, ಲಾಕ್‌ಡೌನ್‌ನಿಂದ ಹಸಿದಿರುವ ಕಟ್ಟಡ ಕೂಲಿಕಾರ್ಮಿಕರಿಗಾಗಿ ಸರ್ಕಾರ ಸಹಾಯವಾಣಿ ಆರಂಭಿಸಿದೆ. 155214 ಸಂಖ್ಯೆಯ ಹೆಲ್ಪ್ ಲೈನ್ ಇದಾಗಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಸಿದ ಕಟ್ಟಡ ಕಾರ್ಮಿಕರಿಗೆ ಹೆಲ್ಪ್ ಲೈನ್ ಆರಂಭವಾಗಿದೆ.ವಾರ್ತಾ ಇಲಾಖೆಯಲ್ಲಿ ಹೆಲ್ಪ್ ಲೈನ್ ಗೆ ವೈದ್ಯಕೀಯ‌ ಶಿಕ್ಷಣ  ಸಚಿವ ಸುಧಾಕರ್ ಚಾಲನೆ ನೀಡಿದರು.ಈ  ಸಹಾಯವಾಣಿಗೆ ಕರೆ ಮಾಡುವ ಮೂಲಕ ರಾಜ್ಯದ ಅಲ್ಲಲ್ಲಿ ಸಿಕ್ಕಿಕೊಂಡಿರುವ ಕಟ್ಟಡ  ಕಾರ್ಮಿಕರು ಈ ಹೆಲ್ಪ್ ಲೈನ್ ಮೂಲಕ ಊಟ ತರಿಸಿಕೊಳ್ಳಬಹುದು ಅಥವಾ ಕಟ್ಟಡ ಕಾರ್ಮಿಕರು  ಇರುವ ಸ್ಥಳದ ಬಗ್ಗೆ ಜನರೂ ಈ ಹೆಲ್ಪ್ ಲೈನ್ ಗೆ ಮಾಹಿತಿ ಕೊಡಬಹುದಾಗಿದೆ.